ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್!

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಮವಾರ (ನವೆಂಬರ್ 2) ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಸುಲಭ ಜಯ ಗಳಿಸಿದೆ. ಆದರೆ ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿವೆ. ಅದರಲ್ಲೂ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ಲೇ ಆಫ್‌ಗೆ ಪ್ರವೇಶಿಸುತ್ತಿರುವುದರಿಂದ ಆರ್‌ಸಿಬಿ ಅಭಿಮಾನಿಗಳಿಗೆ ಇನ್ನಷ್ಟು ಖಷಿಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳೂ ಒಂದು ಬಾರಿಯೂ ಐಪಿಎಲ್ ಕಪ್ ಗೆದ್ದಿಲ್ಲ. ಐಪಿಎಲ್ ಫೈನಲ್‌ಗೆ ಪ್ರವೇಶಿಸದ ಏಕಮಾತ್ರ ತಂಡವೆಂಬ ಕೆಟ್ಟ ದಾಖಲೆ ಡೆಲ್ಲಿ ಹೆಸರಿನಲ್ಲಿದೆ. ಈ ಬಾರಿ ಆ ಕೆಟ್ಟ ದಾಖಲೆ ಬದಿಗೆ ಸರಿಸುವ ಅವಕಾಶ ಶ್ರೇಯಸ್ ಐಯ್ಯರ್ ಬಳಗಕ್ಕಿದೆ.
ಅಷ್ಟೇ ಅಲ್ಲ, ಈ ಐಪಿಎಲ್ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ನಲ್ಲಿ ಅಪರೂಪದ ದಾಖಲೆಗೂ ಕಾರಣವಾಗಿದೆ.

ದೇವದತ್ ಅರ್ಧ ಶತಕ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಜೋಶುವಾ ಫಿಲಿಪ್ 12, ದೇವದತ್ ಪಡಿಕ್ಕಲ್ 50, ವಿರಾಟ್ ಕೊಹ್ಲಿ 29, ಎಬಿ ಡಿ ವಿಲಿಯರ್ಸ್ 35, ಶಿವಂ ದೂಬೆ 17 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 152 ರನ್ ಬಾರಿಸಿತ್ತು.

ರಹಾನೆ ಚತುರ ಬ್ಯಾಟಿಂಗ್
ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 9, ಶಿಖರ್ ಧವನ್ 54, ಅಜಿಂಕ್ಯ ರಹಾನೆ 60, ಮಾರ್ಕಸ್ ಸ್ಟೋಯ್ನಿಸ್ 10, ಶ್ರೇಯಸ್ ಐಯ್ಯರ್ 7, ರಿಷಭ್ ಪಂತ್ 8 ರನ್‌ನೊಂದಿಗೆ 19 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 154 ರನ್ ಬಾರಿಸಿ ಗೆಲುವನ್ನಾಚರಿಸಿತು.

ಡೆಲ್ಲಿ ವಿಶೇಷ ದಾಖಲೆ
ಆರ್‌ಸಿಬಿ ವಿರುದ್ಧದ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿ ಮುಂಬೈ, ತೃತೀಯ ಸ್ಥಾನದಲ್ಲಿ ಬೆಂಗಳೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿವೆ. ಹೀಗಾಗಿ ಡೆಲ್ಲಿ ಹೆಸರಿನಲ್ಲಿ ಅಪರೂಪದ ದಾಖಲೆ ನಿರ್ಮಾಣವಾಗಿದೆ. ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ 10 ಸ್ಥಾನಗಳಲ್ಲಿ ಕಾಣಿಸಿದ ಏಕಮಾತ್ರ ತಂಡವಾಗಿ ಡೆಲ್ಲಿ ಗುರುತಿಸಿಕೊಂಡಿದೆ.

ಐಪಿಎಲ್‌ನಲ್ಲಿ ಡೆಲ್ಲಿಯ 10 ಸ್ಥಾನಗಳು
#1: 2009, 2012
#2: 2020
#3: 2019
#4: 2008
#5: 2010
#6: 2016, 2017
#7: 2015
#8: 2014, 2018
#9: 2013
#10: 2011
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications