ಇಶಾಂತ್ ಶರ್ಮಾಗೆ ಬದಲಿ ಆಟಗಾರನಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಕೋರಿಕೆ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ತಂಡದಲ್ಲಿರುವ ಬಲಗೈ ವೇಗಿ ಇಶಾಂತ್ ಶರ್ಮಾಗೆ ಬದಲಿ ಆಟಗಾರನನ್ನು ನೀಡುವಂತೆ ಐಪಿಎಲ್ ಗರ್ವನಿಂಗ್ ಕೌನ್ಸಿಲ್‌ಗೆ ಪತ್ರ ಬರೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಇಶಾಂತ್ ಕೇವಲ ಒಂದೇ ಪಂದ್ಯ ಆಡಿದ್ದಾರೆ.
ಗಾಯಕ್ಕೀಡಾಗಿರುವ ಇಶಾಂತ್ ಶರ್ಮಾ ಈ ಬಾರಿಯ ಐಪಿಎಲ್‌ನಲ್ಲಿ ಬರೀ ಒಂದೇ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದು. ಸೆಪ್ಟೆಂಬರ್ 29ರಂದು ನಡೆದಿದ್ದ ಈ ಪಂದ್ಯದಲ್ಲಿ ಡೆಲ್ಲಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಿದ್ದವು. ಈ ವೇಳೆ 3 ಓವರ್ ಎಸೆದಿದ್ದ ಇಶಾಂತ್‌ಗೆ ಒಂದೂ ವಿಕೆಟ್ ಕೂಡ ಲಭಿಸಿರಲಿಲ್ಲ.
ಬೆನ್ನು ನೋವಿಗೀಡಾಗಿರುವ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಮೂಲೆಗುಂಪಾಗಿದ್ದಾರೆ. ಈ ಬಾರಿ ಕಿಂಗ್ಸ್ XI ಪಂಜಾಬ್ ವಿರುದ್ಧ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಇಶಾಂತ್ ಬೆನ್ನು ನೋವಿಗೆ ತುತ್ತಾಗಿದ್ದರು. ಆ ಬಳಿಕ ಪಂದ್ಯ ಆಡುವ ಮುನ್ನ ಎರಡು ಪಂದ್ಯಗಳನ್ನು ಇಶಾಂತ್ ಮಿಸ್ ಮಾಡಿಕೊಂಡಿದ್ದರು.
ಇಶಾಂತ್ ಗಾಯ ಸಂಪೂರ್ಣ ಸುಧಾರಿಸದಿರುವುದನ್ನು ಅರಿತಿರುವ ಡೆಲ್ಲಿ, ಆಟಗಾರನನ್ನು ಬದಲಿಸಲು ಮುಂದಾಗಿದೆ ಎನ್ನಲಾಗಿದೆ. ಐಪಿಎಲ್ 2020ರ ಮಿಡ್ ಸೀಸನ್ ಟ್ರಾನ್ಸ್‌ಫರ್ ಅಕ್ಟೋಬರ್ 13ರಂದು ನಡೆಯಲಿದೆ. ಆ ವೇಳೆ ಇಶಾಂತ್ ಬದಲಿಗೆ ಡೆಲ್ಲಿ ಬೇರೊಬ್ಬ ಆಟಗಾರನನ್ನು ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications