ಡೆಲ್ಲಿ ಕ್ಯಾಪಿಟಲ್ಸ್ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್‌ನಿಂದ ಹೊರಕ್ಕೆ

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಎಲ್)ನಿಂದ ಹೊರ ಬಿದ್ದಿದ್ದಾರೆ. ಕೈ ಬೆರಳಿನ ಗಾಯಕ್ಕೆ ತುತ್ತಾಗಿರುವ ಮಿಶ್ರಾ ಮುಂದಿನ ಪಂದ್ಯಗಳಲ್ಲಿ ಡೆಲ್ಲಿ ಪರ ಕಣಕ್ಕಿಳಿಯುತ್ತಿಲ್ಲ.
ಶನಿವಾರ (ಅಕ್ಟೋಬರ್ 3) ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಚೆಂಡನ್ನು ತಡೆಯಲು ಯತ್ನಿಸಿದ ಮಿಶ್ರಾ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬೌಲಿಂಗ್ ಮಾಡುವ ಬೆರಳಿಗೇ ತೀವ್ರ ಗಾಯ ಆಗಿರುವುದರಿಂದ ಮಿಶ್ರಾ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್‌ನ ಅಧಿಕಾರಿಗಳು ಈ ವಿಚಾರವನ್ನು ಖಾತರಿ ಪಡಿಸಿದ್ದಾರೆ. ಭಾನುವಾರ ನಡೆದ ಸ್ಕ್ಯಾನ್ ವೇಳೆ ಮಿಶ್ರಾ ಬೆರಳ ಸ್ನಾಯುರಜ್ಜುಗಳಿಗೆ ತೀವ್ರ ಗಾಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
'ವರದಿಯೊಂದು ಬಂದಿದೆ. ಅಂದ್ಹಾಗೆ ಇದು ಕೆಟ್ಟ ಸುದ್ದಿ. ಅಮಿತ್ ಮಿಶ್ರಾ ಅವರು ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಲಭ್ಯರಿಲ್ಲ. ಅವರಿಗೆ ಬದಲಿ ಆಟಗಾರನನ್ನು ಆರಿಸಲು ಎದುರು ನೋಡುತ್ತಿದ್ದೇವೆ. ಇನ್ನೂ ಕೆಟ್ಟ ಸಂಗತಿಯೆಂದರೆ, ಉತ್ತಮ ಬೌಲಿಂಗ್ ಮಾಡುತ್ತಿದ್ದ ಅವರ ಅನುಭವವನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ,' ಎಂದು ಅಧಿಕಾರಿಗಳು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications