
ಯುಎಇನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಟೂರ್ನಿಯಲ್ಲಿ ಈ ಎರಡು ತಂಡಗಳು ಎರನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು ಹಿಂದಿನ ಹಣಾಹಣಿಯಲ್ಲಿ ಡೆಲ್ಲಿ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಅದರ ಸೇಡು ತಿರಿಸಿಕೊಳ್ಳಲು ಆರ್‌ಆರ್ ತಂಡಕ್ಕೆ ಉತ್ತಮ ಅವಕಾಶ ಇದಾಗಿದೆ.
ಶಾರ್ಜಾದಲ್ಲ ಈ ಹಿಂದೆ ನಡೆದಿದ್ದ ಮುಖಾಮುಖಿಯಲ್ಲಿ ಡೆಲ್ಲಿ 184/8 ರನ್ ಪೇರಿಸಿ 46 ರನ್‌ಗಳ ಅಂತರದಿಂದ ರಾಜಸ್ಥಾನ್ ತಂಡವನ್ನು ಮಣಿಸಿತ್ತು. ಶಿಮ್ರಾನ್ ಹೇಟ್ಮೆರ್ 24 ಎಸೆತಗಳಲ್ಲಿ 45 ರನ್ ಹಾಗೂ ಕಗಿಸೋ ರಬಡ 3 ವಿಕೆಟ್ ಸಾಧನೆ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕಾರಣರಾಗಿದ್ದರು.
ಈ ಎರಡು ತಂಡಗಳಿ ಈವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ರಾಜಸ್ಥಾನ್ 11 ರಲ್ಲಿ ಗೆಲುವು ಕಂಡಿದ್ದರೆ ಡೆಲ್ಲಿ 10 ಪಂದ್ಯಗಲಲ್ಲಿ ಗೆದ್ದಿದೆ. ಈ ಮೂಲಕ ರಾಜಸ್ಥಾನ್ ತಂಡ ಸಣ್ಣ ಮುನ್ನಡೆಯನ್ನು ಹೊಂದಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಗೆದ್ದು ಸಮಬಲ ಮಾಡಿಕೊಳ್ಳುವ ಅವಕಾಶವೂ ಇದೆ.
ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಅಂಕಪಟ್ಟಿಯಲ್ಲಿ ಸದ್ಯ 2ನೇ ಸ್ಥಾನದಲ್ಲಿದೆ. ಆಡಿದ 7 ಪಂದ್ಯಗಳಲ್ಲಿ 5 ಗೆಲುವು ಹಾಗೂ 2 ಸೋಲು ಕಂಡಿದ್ದು 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಮತ್ತೊಂದೆಡೆ ರಾಜಸ್ಥಾನ್ ತಂಡ ಆಡಿದ 7 ಪಂದ್ಯಗಳಲ್ಲಿ 3 ಗೆಲುವು ಹಾಗೂ 4 ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇನ್ನೂ ಈ ಬಾರಿಯ ಆವೃತ್ತಿಯಲ್ಲಿ ಈ ಎರಡು ತಂಡಗಳ ಪೈಕಿ ಡೆಲ್ಲಿ ತಂಡದ ನಾಯಕ ಶ್ರೇಯಸ್ ಐಯ್ಯರ್ 245 ರನ್ ಗಳಿಸಿದ್ದಾರೆ. ರಾಜಸ್ಥಾನ್ ತಂಡದ ಸಂಜು ಸ್ಯಾಮ್ಸನ್ ಹಾಗೂ ಡೆಲ್ಲಿ ತಂಡದ ಪೃಥ್ವಿ ಶಾ ತಲಾ 202 ರನ್ ಗಳಿಸಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಬೌಲಿಮಗ್ ವಿಭಾಗದಲ್ಲಿ ಡೆಲ್ಲಿ ತಂಡದ ಕಗಿಸೋ ರಬಡಾ 17 ವಿಕೆಟ್ ಕಿತ್ತು ಮಿಂಚಿದ್ದರೆ ಆರ್‌ಆರ್ ತಂಡದ ಜೋಫ್ರಾ ಆರ್ಚರ್ 9 ವಿಕೆಟ್ ಪಡೆದಿದ್ದಾ