ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲಿನ ಬಳಿಕವೂ ನಾವು ಆತ್ಮವಿಶ್ವಾಸ ಹೊಂದಿದ್ದೇವೆ ಎಂದ ಆರ್‌ಸಿಬಿ ನಾಯಕ ಕೊಹ್ಲಿ

IPL 2020: Despite the loss to CSK we are very confident as a side, says Kohli

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿಗೆ ಸೋಲಿನ ರುಚಿ ತೋರಿಸಿದೆ ಸಿಎಸ್‌ಕೆ. ಆರ್‌ಸಿಬಿ ನೀಡಿದ 146 ರಬನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ 2ವಿಕೆಟ್ ಕಳೆದುಕೊಮಡು ಈ ಗುರಿ ತಲುಪಿದೆ. ಈ ಮೂಲಕ 8 ವಿಕೆಟ್‌ಗಳ ಜಯಗಳಿಸಿದೆ.

ಈ ಸೊಲಿನ ಬಗ್ಗೆ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ "ಎರಡನೇ ಇನ್ನಿಂಗ್ಸ್‌ನಲ್ಲಿ ನೀವು ನೋಡಿದ ಪಿಚ್ ಅದರ ನೈಜ ರೂಪದ್ದಾಗಿರಲಿಲ್ಲ. ಸಿಎಸ್‌ಕೆ ಬೌಲರ್‌ಗಳು ವಿಕೆಟ್‌ನಿಂದ ವಿಕೆಟ್‌ಗೆ ಚೆಂಡು ಎಸೆಯುತ್ತಿದ್ದರು. ನಾವು ಬ್ಯಾಟಿಂಗ್ ಮಾಡಬೇಕಾದರೆ ಚೆಂಡು ಬ್ಯಾಟ್‌ಗೆ ಸರಾಗವಾಗಿ ಬರುತ್ತಿರಲಿಲ್ಲ. ಸಿಎಸ್‌ಕೆ ಸ್ಪಿನ್ನರ್‌ಗಳು ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ" ಎಂದಿದ್ದಾರೆ.

ಈ ಪಿಚ್‌ನಲ್ಲಿ 140+ ಸ್ಪರ್ಧಾತ್ಮಕ ಮೊತ್ತವಾಗಿದೆ ಎಂದು ನಾವು ಭಾವಿಸಿದ್ದೆವು. ಆದರೂ ನಾವು 150 ರನ್‌ಗಳ ಗುರಿಯಿಟ್ಟುಕೊಂಡಿದ್ದೆವು. ಬೌಲಿಂಗ್‌ನಲ್ಲಿ ನಾವು ವೇಗದ ಬದಲಾವಣೆ ಹಾಗೂ ಬೇಸ್ ಬೌನ್ಸರ್‌ಗಳನ್ನು ಎಸೆಯಬಹುದೆಂದು ಬಾವಿಸಿದ್ದೆ. ನಾವು ಇನ್ನಷ್ಟು ತೀವ್ರವಾಗಿ ಪ್ರದರ್ಶನ ನೀಡಬೇಕಾಗಿತ್ತು. ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚನ ಅವಕಾಶವನ್ನು ನೀಡಿದೆವು" ಎಂದು ವಿರಾಟ್ ಕೊಹ್ಲಿ ಸೋಲಿಗೆ ಕಾರಣಗಳನ್ನು ಹೇಳಿದ್ದಾರೆ.

ನಮಗೆ ಸಿಕ್ಕ ದಿನದಂದು ಉತ್ತಮ ಪ್ರದರ್ಶನ ನೀಡಲು ನಾವು ಸಿದ್ಧರಾಗಿರಬೇಕು. ಎಲ್ಲಾ ವಿಭಾಗಗಳಲ್ಲೂ ನಾವು ಅತ್ಯುತ್ತಮ ಆಟಗಾರರನ್ನು ಹೊಂದಿದ್ದೇವೆ. ನಿರ್ದಿಷ್ಟ ದಿನದಲ್ಲಿ ನಿಮ್ಮ ಆಟ ಹೇಗಿರುತ್ತದ ಎಂಬುದು ಮುಖ್ಯವಾಗುತ್ತದೆ. ನಾವು ನಿಜಕ್ಕೂ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ಅಲ್ಲಿ ಇಲ್ಲಿ ಸಂಭವಿಸುವ ಸೋಲುಗಳಲ್ಲಿ ನಾವು ಒಪ್ಪಿಕೊಳ್ಳಬೇಕು" ಎಂದು ಕೊಹ್ಲಿ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ವಿರಾಟ್ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಬಹುತೇಕ ಪ್ಲೇ ಆಫ್‌ಅನ್ನು ಕಾತ್ರಿ ಪಡಿಸಿಕೊಂಡಿದೆ. ಆದರೆ ಸಿಎಸ್‌ಕೆ ತಂಡದ ಪರಿಸ್ಥಿತಿ ವಿಭಿನ್ನವಾಗಿದ್ದು ಟೂರ್ನಿಯಲ್ಲಿ ಹೊರಬೀಳುವ ಹಂತದಲ್ಲಿದೆ. ಆದರೆ ಇಂದಿನ ಪಂದ್ಯದ ಫಲಿತಾಂಶ ಆರ್‌ಸಿಬಿಗೆ ಹಿನ್ನಡೆಯುಂಟು ಮಾಡಿರುವುದು ಸುಳ್ಳಲ್ಲ.

Story first published: Sunday, October 25, 2020, 20:39 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X