ಯುವರಾಜ್ ಹಾಕಿದ ಸವಾಲಿಗೆ ವಿನಮ್ರ ಉತ್ತರದ ಮೂಲಕ ಹೃದಯ ಗೆದ್ದ ದೇವದತ್ ಪಡಿಕ್ಕಲ್

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಯುವ ಆಟಗಾರ ದೇವದತ್ ಪಡಿಕ್ಕಲ್ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಿದ್ದಾರೆ. ಭವಿಷ್ಯದ ತಾರೆ ಎಂದು ಈಗಾಗಲೇ ದಿಗ್ಗಜ ಆಟಗಾರರಿಂದ ಕರೆಸಿಕೊಂಡಿದ್ದಾರೆ. ಸ್ಪೋಟಕ ಆಟವನ್ನು ಪ್ರದರ್ಶಿಸುವ ಪಡಿಕ್ಕಲ್ ಬ್ಯಾಟಿಂಗ್ ಶೈಲಿ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಶೈಲಿಗೆ ಅಭಿಮಾನಿಗಳು ಹೋಲಿಸುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಬಳಿಕ ಸ್ವತಃ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಯುವ ಆಟಗಾರ ದೇವದತ್ ಪಡಿಕ್ಕಲ್‌ಗೆ ಸವಾಲೊಂದನ್ನು ಹಾಕಿದ್ದರು. ಈ ಸವಾಲಿಗೆ ಪಡಿಕ್ಕಲ್ ನೀಡಿರುವ ಉತ್ತರ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಹಾಗಾದರೆ ಯುವ ಆಟಗಾರ ಪಡಿಕ್ಕಲ್‌ಗೆ ಯುವರಾಜ್ ಸಿಂಗ್ ಹಾಕಿದ ಸವಾಲು ಏನು? ಪಡಿಕ್ಕಲ್ ಅದಕ್ಕೇ ಯಾವ ರೀತಿ ಉತ್ತರಿಸಿದ್ದಾರೆ? ಮುಂದೆ ಓದಿ
ಕೊಹ್ಲಿ ಫಾರ್ಮ್ ಬಗ್ಗೆ ಯುವಿ ಪ್ರಶಂಸೆ
ಟ್ವಿಟ್ಟರ್‌ನಲ್ಲಿ ಯುವರಾಜ್ ಸಿಂಗ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡುತ್ತಾ ಕೊಹ್ಲಿಯನ್ನು ಹೊಗಳಿದ್ದಾರೆ. "ಫಾರ್ಮ್ ಟೆಂಪರರಿ, ಆದರೆ ಕ್ಲಾಸ್ ಶಾಶ್ವತ! ಹಾಗಿದ್ದರೂ ನಾನು ಈತನನ್ನು ಕಳೆದ 8 ವರ್ಚಗಳಲ್ಲಿ ಒಂದು ಬಾರಿಯೂ ಫಾರ್ಮ್ ಕಳೆದುಕೊಂಡಿದ್ದನ್ನು ಕಂಡಿಲ್ಲ. ನಿಜಕ್ಕೂ ನಂಬುವುದು ಕಷ್ಟ" ಎಂದು ವಿರಾಟ್ ಕೊಹ್ಲಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ಪಡಿಕ್ಕಲ್‌ಗೆ ಸವಾಲು
ಯುವರಾಜ್ ಸಿಂಗ್ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಬಳಿಕ ಅದೇ ಟ್ವೀಟ್‌ನಲ್ಲಿ ಪಡಿಕ್ಕಲ್‌ಗೆ ಸವಾಲೊಂದನ್ನು ಹಾಕಿದ್ದಾರೆ. "ಪಡಿಕ್ಕಲ್ ನಿಜಕ್ಕೂ ಅದ್ಬುತವಾಗಿ ಕಾಣಿಸುತ್ತಿದ್ದೀರಿ. ಜೊತೆಯಾಗಿ ಬ್ಯಾಟ್‌ಮಾಡಬೇಕು ಹಾಗೂ ಯಾರು ದೊಡ್ಡ ಹೊಡೆತವನ್ನು ಬಾರಿಸುತ್ತಾರೆ ನೋಡೋಣ" ಎಂದು ಟ್ವೀಟ್ ಮಾಡಿದ್ದರು.
"ನಿಮ್ಮೊಂದಿಗೆ ಸ್ಪರ್ಧಿಸಲಾರೆ ಪಾಜಿ"
ಯುವರಾಜ್ ಸಿಂಗ್ ಹಾಕಿದ ಸವಾಲಿಗೆ ದೇವದತ್ ಪಡಿಕ್ಕಲ್ ನೀಡಿದ ಪ್ರತಿಕ್ರಿಯೆ ನಿಜಕ್ಕೂ ಅಭಿಮಾನಿಗಳ ಹೃದಯ ಗೆದ್ದಿದೆ. "ನಿಮ್ಮ ಜೊತೆಗೆ ನಾನು ಸ್ಪರ್ಧಿಸಲಾರೆ ಪಾಜಿ, ಫ್ಲಿಕ್ ಹೊಡೆತವನ್ನು ಕಲಿತಿದ್ದೇ ನಿಮ್ಮನ್ನು ನೋಡಿ. ನಿಮ್ಮೊಂದಿಗೆ ಬ್ಯಾಟ್ ಮಾಡಲು ಯಾವಾಗಲೂ ಬಯಸುತ್ತೇನೆ. ಲೆಟ್ಸ್ ಗೋ" ಎಂದು ವಿನಮ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ದೇವದತ್ ಪಡಿಕ್ಕಲ್.
ಸೇಮ್ ಟು ಸೇಮ್ ಶಾಟ್
ಪಡಿಕ್ಕಲ್ ಬ್ಯಾಟಿಂಗ್ ಶೈಲಿ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುವ ಜೊತೆಗೆ ಅವರ ಬ್ಯಾಟಿಂಗ್ ಶೈಲಿ ಯುವರಾಜ್ ಶೈಲಿಯ ಜೊತೆಗೆ ಹೋಲಿಕೆಯಾಗುತ್ತಿದೆ. ಅದರಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬಾರಿಸಿದ ಒಂದು ಫ್ಲಿಪ್ ಶಾಟ್ ಟ್ವಿಟ್ಟರ್‌ನಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಯುವರಾಜ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ 2008ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬಾರಿಸಿದ ಹೊಡೆತದ ಪ್ರತಿರೂಪದಂತಿದೆ. ಈ ಎರಡು ವಿಡಿಯೋಗಳಿಗೆ ಹೋಲಿಕೆ ಮಾಡಿ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications