For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಇನ್ನೆಂದೂ ಆ ರೀತಿ ಮಾಡಬೇಡ ಎಂದು ಕ್ವಿಂಟನ್ ಡಿ ಕಾಕ್‌ಗೆ ಕೋಚ್ ಎಚ್ಚರಿಕೆ

IPL 2020: ‘Don’t do that again,’ Mahela Jayawardene warns Quinton de Kock

ಕೊಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯವನ್ನು ದಾಖಲಿಸಿದೆ. ಎಲ್ಲಾ ವಿಭಾಗದಲ್ಲೂ ಅದ್ಭುತ ಪ್ರದರ್ಶನವನ್ನು ನಿಡಿದ ಮುಂಬೈ ಅರ್ಹ ಗೆಲುವನ್ನು ಸಂಪಾದಿಸಿತು. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಪ್ರದರ್ಶನ ಮುಂಬೈ ಸುಲಭವಾಗಿ ಗೆಲ್ಲುವಂತೆ ಮಾಡಿತ್ತು. ಹಾಗಿದ್ದರೂ ಮುಂಬೈ ಇಂಡಿಯನ್ಸ್ ಕೋಚ್ ಡಿ ಕಾಕ್‌ಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಅಜೇಯ ಪ್ರದರ್ಶನದ ಮೂಲಕ ಮಿಂಚಿದ ಡಿಕಾಕ್ 44 ಎಸೆತಗಳಲ್ಲಿ 78 ರನ್ ಸಿಡಿಸಿದ್ದರು. ಇದರಲ್ಲಿ 9 ಬೌಂಡಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. ಕೊನೆಯವರೆಗೂ ಔಟಾಗದೆಯೇ ಉಳಿದ ಡಿಕಾಕ್ ಈ ಪ್ರದರ್ಶನದ ಕಾರಣಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

ಆದರೆ ಕ್ವಿಂಟನ್ ಡಿಕಾಕ್ ಪ್ರದರ್ಶನದ ವಿಚಾರಕ್ಕೆ ಮುಂಬೈ ಇಮಡಿಯನ್ಸ್ ಕೋಚ್ ಜಯವರ್ಧನೆ ಯಾವುದೇ ಎಚ್ಚರಿಕೆಯ ಮಾತನ್ನು ಆಡಿಲ್ಲ. ಆದರೆ ಬ್ಯಾಟಿಂಗ್ ಸಂದರ್ಭದಲ್ಲಿ ಕ್ವಿಂಟನ್ ಡಿಕಾಕ್ ಧರಿಸಿದ್ದ ಪ್ಯಾಂಟ್ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಯಾಕೆಂದರೆ ಕ್ವಿಂಟನ್ ಡಿಕಾಕ್ ಮುಖ್ಯ ಪಂದ್ಯಗಳಲ್ಲಿ ಬಳಸುವ ಪ್ಯಾಂಟನ್ನು ಬಳಸದೆ ಅಭ್ಯಾಸದ ಪ್ಯಾಂಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದರು.

ಪಮದ್ಯ ಮುಗಿದ ಬಳಿಕ ಕೋಚ್ ಜಯವರ್ಧನೆ ಈ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದಾರೆ. "ಕ್ವಿಂಟನ್ ಡಿ ಕಾಕ್ ಅಭ್ಯಾಸದಲ್ಲಿ ಉಪಯೋಗಿಸುವ ಪ್ಯಾಂಟನ್ನು ಬಳಸಿ ಆಡಲಿಳಿದಿರುವುದನ್ನು ಹೊರತು ಪಡಿಸಿದರೆ ಎಲ್ಲವೂ ತುಂಬಾ ಚೆನ್ನಾಗಿ ನಡೆದಿದೆ. ಹಾಗಾಗಿ ಇನ್ನೊಂದು ಬಾರಿ ಆ ರೀತಿ ಮಾಡಬೇಡಿ. ಯಾಕೆಂದರೆ ಮಾರ್ಕೆಟಿಂಗ್ ಜವಾಬ್ಧಾರಿಯನ್ನು ಹೊತ್ತಿರುವವರು ತೊಂದರೆಗೆ ಸಿಲುಕುತ್ತಾರೆ" ಎಂದು ಜಯವರ್ಧನೆ ಈ ಸಂದರ್ಭದಲ್ಲಿ ಲಘುವಾಗಿ ತಿಳಿಸಿದ್ದಾರೆ.

ಅಭ್ಯಾಸದ ಸಂದರ್ಭದಲ್ಲಿ ತಂಡಗಳು ಬಳಸುವ ಜರ್ಸಿ ಹಾಗೂ ಪ್ಯಾಂಟ್‌ಗೆ ಹಾಗೂ ಪಂದ್ಯದಲ್ಲಿ ಬಳಸುವ ವಸ್ತ್ರಗಳು ಬಹುತೇಕ ಭಿನ್ನವಾಗಿಯೇ ಇರುತ್ತದೆ. ಮುಂಬೈ ತಂಡದ ಅಭ್ಯಾಸದ ಪ್ಯಾಂಟ್‌ನಲ್ಲಿ ಕೇಸರಿ ಬಣ್ಣದ ಗೆರೆಗಳು ಇದ್ದು ಪಂದ್ಯದ ಸಂದರ್ಭದಲ್ಲಿ ಬಳಸುವ ಪ್ಯಾಂಡ್‌ನಲ್ಲಿ ಅದು ಚಿನ್ನದ ಬಣ್ಣವನ್ನು ಹೊಂದಿದೆ. ಹೀಗಾಗಿ ಬ್ಯಾಟಿಂಗ್‌ನ ಉದ್ದಕ್ಕೂ ಡಿ ಕಾಕ್ ಕೇಸರಿ ಬಣ್ಣದ ಗೆರೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದರು.

Story first published: Saturday, October 17, 2020, 16:28 [IST]
Other articles published on Oct 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+