ಐಪಿಎಲ್ 2020: ಧವನ್ ಜೊತೆಗಿನ ಜೊತೆಯಾಟವನ್ನು ವಿವರಿಸಿದ ಸ್ಟೋಯ್ನಿಸ್

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪ್ಲೇ ಆಪ್ ಪಂದ್ಯದಲ್ಲಿ ಡೆಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಿಕೊಂಡಿತ್ತು. ಆರಂಭಿಕನಾಗಿ ಶಿಖರ್ ಧವನ್ ಜೊತೆಗೆ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಜೋಡಿಯಿಮದ ಉತ್ತಮ ಪ್ರದರ್ಶನ ಹೊರಹೊಮ್ಮಿದ ಕಾರಣ ಡೆಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು.
ಶಿಖರ್ ಧವನ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಮಾರ್ಕಸ್ ಸ್ಟೋಯ್ನಿಸ್ ತಮ್ಮ ಜೊತೆಯಾಟದ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಧವನ್ ಜೊತೆಗೆ ಬ್ಯಾಟಿಂಗ್ ನಡೆಸುವುದು ತುಂಬಾ ಸುಲಭ, ಆತ ನಮ್ಮ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತಾನೆ ಎಂದು ವಿವರಿಸಿದ್ದಾರೆ.
"ಶಿಖರ್ ಧವನ್ ಈ ಬಾರಿಯ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನನ್ನನ್ನು ಆರಂಭಿಕನಾಗಿ ಕಣಕ್ಕಿಳಿಸಿದ ಬಗ್ಗೆ ಸಾಕಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಅವಕಾಶವನ್ನು ನನಗೆ ನೀಡಿದ್ದಕ್ಕಾಗಿ ಖಣಡಿತಾ ನಾಯಕ ಶ್ರೇಯಸ್ ಐಯ್ಯರ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ" ಎಂದಿದ್ದಾರೆ ಸ್ಟೋಯ್ನಿಸ್.
ಶಿಖರ್ ಧವನ್ ಜೊತೆಗೆ ಬ್ಯಾಟಿಂಗ್ ನಡೆಸುವುದು ತುಂಬಾ ಸುಲಭ. ಆತ ನಿಮ್ಮ ಮೇಲಿರುವ ಒತ್ತಡವನ್ನು ಕಡಿಮೆ ಮಾಡುತ್ತಾನೆ. ಚೆಮಡನ್ನು ಎದುರಿಸುವ ಟೈಮಿಂಗ್ ಕೂಡ ಅದ್ಭುತವಾಗಿದೆ. ಟೂರ್ನಿಯುದ್ದಕ್ಕು ಧವನ್ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ತಂಡಕ್ಕೆ ಉತ್ತಮ ಆರಮಬ ನನ್ನಿಂದ ನಿಡಲು ಸಾಧ್ಯವಾಗಿದ್ದಕ್ಕೆ ಸಂತುಷ್ಟನಾಗುದ್ದೇನೆ ಎಂದು ಸ್ಟೋಯ್ನಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಬೌಲಿಂಗ್ ಬಗ್ಗೆಯೂ ಸ್ಟೋಯ್ನಿಸ್ ಪ್ರತಿಕ್ರಿಯೆ ನೀಡಿದರು. ನಾನು ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿದ್ದೆ ಎಂದು ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications