Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಎಲಿಮಿನೇಟರ್: ಬೆಂಗಳೂರು vs ಹೈದರಾಬಾದ್, ಪ್ರಮುಖ ಮಾಹಿತಿ

IPL 2020: Eliminator, Royal Challengers Bangalore vs Sunrisers Hyderabad, Preview

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ 2020ರ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಎರಡೂ ತಂಡಗಳು ಕಣ್ಣಿಟ್ಟಿವೆ. ಗೆಲುವಿಗಾಗಿ ಎರಡೂ ತಂಡಗಳು ಪೈಪೋಟಿ ನಡೆಸಲಿವೆ.

ಲೀಗ್ ಹಂತದ ಪಂದ್ಯಗಳಲ್ಲಿ ಆಡಿದ 14 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 14ರಲ್ಲಿ 7 ಗೆಲುವು ಕಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ನಿಂತಿತ್ತು. ಸನ್ ರೈಸರ್ಸ್ ಹೈದರಾಬಾದ್ 14ರಲ್ಲಿ 7 ಗೆಲುವಿನೊಂದಿಗೆ 4ನೇ ಸ್ಥಾನ ಪಡೆದುಕೊಂಡಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ ಎಲಿಮಿನೇಟರ್ ಪಂದ್ಯ ಶುಕ್ರವಾರ (ನವೆಂಬರ್ 6) 7.30 pmಗೆ ಆರಂಭವಾಗಲಿದ್ದು, 7 pmಗೆ ಟಾಸ್ ನಡೆಯಲಿದೆ.

ಹವಾಮಾನ ವರದಿ

ಹವಾಮಾನ ವರದಿ

ಬೆಂಗಳೂರು vs ಹೈದರಾಬಾದ್ ಎಲಿಮಿನೇಟರ್ ಪಂದ್ಯ ನಡೆಯುವ ದಿನ ಅಂದರೆ ಶುಕ್ರವಾರ ಅಬುಧಾಬಿಯಲ್ಲಿ 30 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ರಾತ್ರಿಯ ವೇಳೆ ಮಳೆಯ ಸಾಧ್ಯತೆಯಿದೆ, ಆದರೆ ತೀರಾ ಕಡಿಮೆ ಸಾಧ್ಯತೆ ಎಂದು ಅಲ್ಲಿನ ಹವಾಮಾನ ವರದಿ ಹೇಳಿದೆ.

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಅಬಿಧಾಬಿಯದ್ದು ಒಂಥರಾ ಸಮತೋಲಿತ ಪಿಚ್. ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್ ಎರಡಕ್ಕೂ ಪಿಚ್ ನೆರವು ನೀಡಲಿದೆ. ಕ್ರೀಸ್‌ನಲ್ಲಿ ಹೆಚ್ಚು ಕಾಲ ನಿಲ್ಲುವ ಬ್ಯಾಟ್ಸ್‌ಮನ್ ಒಳ್ಳೆಯ ಹೊಡೆತಗಳನ್ನು ಕೊಡಬಹುದಾಗಿದೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿರಲಿದೆ.

ಹೈದರಾಬಾದ್ ಸಂಭಾವ್ಯ ತಂಡ

ಹೈದರಾಬಾದ್ ಸಂಭಾವ್ಯ ತಂಡ

ಡೇವಿಡ್ ವಾರ್ನರ್ (ಸಿ), ವೃದ್ಧಿಮಾನ್ ಸಹಾ (ವಿಕೆ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಪ್ರಿಯಮ್ ಗಾರ್ಗ್/ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ. ನಟರಾಜನ್.

ಬೆಂಗಳೂರು ಸಂಭಾವ್ಯ ತಂಡ

ಬೆಂಗಳೂರು ಸಂಭಾವ್ಯ ತಂಡ

ಜೋಶುವಾ ಫಿಲಿಪ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್ (ವಿಕೆ), ಮೊಯೀನ್ ಅಲಿ, ಶಿವಮ್ ದೂಬೆ, ಕ್ರಿಸ್ ಮೋರಿಸ್/ಇಸುರು ಉದಾನಾ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ / ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್.

Story first published: Friday, November 6, 2020, 11:09 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+