Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ರಾಜಸ್ಥಾನಕ್ಕೆ 'ಬೆನ್' ಬಲ ಖಚಿತ : ದುಬೈಗೆ ಬಂದಿಳಿದ ಸ್ಟೋಕ್ಸ್

IPL 2020: England cricketer Rajasthan Royals star allrounder Ben Stokes lands in UAE

ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ರಾಜಸ್ಥಾನ ತಂಡದಲ್ಲಿ ಕಣಕ್ಕಿಳಿಯಲು ಬೆನ್ ಸ್ಟೋಕ್ಸ್ ದುಬೈಗೆ ಬಂದಿಳಿದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಈ ಮೂಲಕ ಸ್ಟೋಕ್ಸ್ ಖಚಿತ ಉತ್ತರವನ್ನು ನೀಡಿದ್ದಾರೆ. ಭಾನುವಾರ ದುಬೈಗೆ ಬೆನ್ ಸ್ಟೋಕ್ಸ್ ಆಗಮಿಸಿದ್ದು ಕೋವಿಡ್ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಒಳಗಾಗಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಸರಣಿಯ ಮಧ್ಯ ಭಾಗದಲ್ಲಿ ಬೆನ್ ಸ್ಟೋಕ್ಸ್ ತಮ್ಮ ತವರು ನ್ಯೂಜಿಲೆಂಡ್‌ಗೆ ಮರಳಿದ್ದರು. ಕ್ರೈಸ್ಟ್‌ಚರ್ಚ್‌ನಲ್ಲಿ ವಾಸವಾಗಿರುವ ಬೆನ್‌ಸ್ಟೋಕ್ಸ್ ತಂದೆಗೆ ಅನಾರೋಗ್ಯ ಉಂಟಾಗಿದ್ದ ಕಾರಣ ಸ್ಟೋಕ್ಸ್ ಸರಣಿಯಿಂದ ವಾಪಾಸ್ ಆಗಿದ್ದರು. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಸ್ಟೋಕ್ಸ್ ಅಲಭ್ಯರಾಗಿದ್ದರು.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಇಂಗ್ಲೆಂಡ್‌ನಿಂದ ನೇರವಾಗಿ ದುಬೈಗೆ ಬಂದಿಳಿದಿದ್ದರೂ ಬೆನ್ ಸ್ಟೋಕ್ಸ್ ಪಾಲ್ಗೊಳ್ಳುವಿಕೆಯ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಆದರೆ ಶನಿವಾರ ರಾಜಸ್ಥಾನ್ ರಾಯಲ್ಸ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಬೆನ್ ಸ್ಟೋಕ್ಸ್ ಆಗಮನದ ಬಗ್ಗೆ ಕೆಲ ಸುಳಿವುಗಳನ್ನು ನೀಡಿತ್ತು.

ಭಾನುವಾರ ಬೆನ್ ಸ್ಟೋಕ್ಸ್ ದುಬೈಗೆ ಬಂದಿಳಿದಿದ್ದು ಕೋವಿಡ್-19 ಪರೀಕ್ಷೆ ಸಹಿತ ಕೆಲ ಪ್ರಕ್ರಿಯೆಗಳಿಗೆ ಒಳಗಾಗಿದ್ದಾರೆ. ಮುಂದಿನ ಆರು ದಿನಗಳ ಕಾಲ ಬೆನ್ ಸ್ಟೋಕ್ಸ್ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಅದಾದ ಬಳಿಕ ಕೊರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿಯ ನಂತರ ತಂಡದ ಬಯೋ ಬಬಲ್‌ಗೆ ಸೇರ್ಪಡೆಗೊಳ್ಳಲಿದ್ದಾರೆ.

ಬೆನ್ ಸ್ಟೋಕ್ಸ್ ಆಗಮನ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆರ್‌ಆರ್ ತಂಡ ನಂತರ ಕಳೆಗುಂದಿದಂತಿದೆ. ಕೆಕೆಆರ್‌ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ಬೆನ್ ಸ್ಟೋಕ್ಸ್ ಆಗಮನ ತಂಡಕ್ಕೆ ಬಲ ನೀಡುವುದರಲ್ಲಿ ಅನುಮಾನವಿಲ್ಲ.

Story first published: Sunday, October 4, 2020, 16:26 [IST]
Other articles published on Oct 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+