For Quick Alerts
ALLOW NOTIFICATIONS  
For Daily Alerts
 

RCB ಪುಟಿದೇಳಲಿದೆ ಎಂದ ಕೊಹ್ಲಿ ಅಭಿಮಾನಿ ಮಹಿಳಾ ಕ್ರಿಕೆಟರ್

IPL 2020: England Womens Crickter ALexandra Hartley cheers for RCB

ಇಂಡಿಯನ್ ಪ್ರೀಮಿಯರ್ ಲೀಗ್ ಅಭಿಮಾನಿಗಳು ಭಾರತ ಉಪಖಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದೆಲ್ಲೆಡೆ ಇದ್ದಾರೆ. ಅದರಲ್ಲೂ ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗಂತೂ ಮಹಿಳಾ ಅಭಿಮಾನಿಗಳು ಹೆಚ್ಚಾಗೇ ಇದ್ದಾರೆ. ಇಂಗ್ಲೆಂಡಿನ ಮಹಿಳಾ ಕ್ರಿಕೆಟರ್ಸ್ ಗಳಿಗಂತೂ ಕೊಹ್ಲಿ ಎಂದರೆ ಅಚ್ಚುಮೆಚ್ಚು.

ಇಂಗ್ಲೆಂಡಿನ ಮಹಿಳಾ ಕ್ರಿಕೆಟರ್ ಬೌಲರ್ ಅಲೆಕ್ಸಾಂಡ್ರಾ ಹಾರ್ಟ್ಲಿ ಅವರು ನಿರಂತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟ್ವೀಟ್ ಮಾಡುತ್ತಾ ಬಂದಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಹೋರಾಟದ ನಡುವೆಯೂ ಆರ್ ಸಿಬಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಈ ಬಗ್ಗೆ ಟ್ವೀಟ್ ಮಾಡಿರುವ ಅಲೆಕ್ಸಾಂಡ್ರಾ, ಆರ್ ಸಿಬಿ ಮತ್ತೊಮ್ಮೆ ಪುಟಿದೇಳಲಿದೆ ಗೆಲುವಿನ ಲಯಕ್ಕೆ ಮರಳಲಿದೆ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ ಸಿಬಿಯ ಅಧಿಕೃತ ಹ್ಯಾಶ್ ಟ್ಯಾಗ್ #Playbold ಎಂದು ಬರೆದಿದ್ದಾರೆ.

ಡೆಲ್ಲಿಕ್ಯಾಪಿಟಲ್ಸ್‌ ವಿರುದ್ಧ 10 ರನ್‌ ದಾಖಲಿಸುತ್ತಿದ್ದಂತೆ ವಿರಾಟ್‌ ಹೊಸ ಮೈಲಿಗಲ್ಲು ದಾಟಿದರು. ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ತಮ್ಮ ಹೆಸರಿಗೆ ದಾಖಲಿಸಿಕೊಂಡರು.

39 ಎಸೆತಗಳಲ್ಲಿ 43 ರನ್ (2 ಬೌಂಡರಿ, 1ಸಿಕ್ಸರ್) ಗಳಿಸಿ ಔಟಾದ ಕೊಹ್ಲಿ ತಂಡದ ರನ್ ಚೇಸ್ ನಲ್ಲಿ ಎಡವಿದರು. 197ರನ್ ಬೆನ್ನು ಹತ್ತಿದ ಆರ್ ಸಿಬಿ 137/9 ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಪಂದ್ಯದಲ್ಲಿ ಗೆಲುವು ಸಾಧಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಬೆಂಗಳೂರು ಮೂರನೇ ಸ್ಥಾನದಲ್ಲೇ ಉಳಿದಿದೆ.

IPL 2020: England Womens Crickter ALexandra Hartley cheers for RCB

ಅಲೆಕ್ಸಾಂಡ್ರಾ ಟ್ವೀಟ್ ಗೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಕಿಂಗ್ಸ್ ಎಲೆವನ್ ಪಂಜಾಬ್ ಬೆಂಬಲಿಸಿದ ಸಹ ಆಟಗಾರ್ತಿಗೆ ಅಲೆಕ್ಸಾಂಡ್ರಾ ಪ್ರತಿಕ್ರಿಯಿಸಿದ್ದ ತಮಾಷೆಯ ಟ್ವೀಟ್ ಸ್ಕ್ರೀನ್ ಶಾಟ್ ಹಾಕಿದ್ದಾರೆ.

ಇಂಗ್ಲೆಂಡ್ ಪರ 2016ರಲ್ಲಿ ಏಕದಿನ ಪಂದ್ಯವಾಡಿರುವ ಎಡಗೈ ಬೌಲರ್ ಅಲೆಕ್ಸಾಂಡ್ರಾ 28 ಪಂದ್ಯಗಳನ್ನಾಡಿ 39 ವಿಕೆಟ್ ಪಡೆದಿದ್ದಾರೆ. 4 ಟಿ20 ಪಂದ್ಯಗಳಿಂದ 3 ವಿಕೆಟ್ ಗಳಿಸಿದ್ದಾರೆ. ಮಿಡ್ಲ್ ಸೆಕ್ಸ್, ಲಂಕಾಶೈರ್, ಸರೆ ಕ್ಲಬ್ ಗಳ ಪರ ಕೂಡಾ ಅಲೆಕ್ಸಾಂಡ್ರಾ ಬೌಲ್ ಮಾಡಿದ್ದಾರೆ.

Story first published: Wednesday, October 7, 2020, 10:00 [IST]
Other articles published on Oct 7, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+