
ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ
ಕರ್ನಾಟಕದ ತಂಡ ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಕಪ್ ಗೆಲ್ಲುವಂತೆ ಅಭಿಮಾನಿಯೊಬ್ಬರು ವಿಶೇಷ ಪೂಜೆ ಮಾಡಿಸಿದ್ದಾರೆ. ಧಾರವಾಡದ ದುರ್ಗಾದೇವಿ ದೇವಸ್ಥಾನದಲ್ಲಿ ಅಭಿಮಾನಿಯೊಬ್ಬರು ಆರ್‌ಸಿಬಿ ಗೆಲುವಿಗಾಗಿ ಪೂಜೆ ಮಾಡಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಅಭಿಮಾನಿಯ ಹುಚ್ಚುತನ
ಧಾರವಾಡದ ಕಿಲ್ಲಾದಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ಆರ್‌ಸಿಬಿ ಜಯಕ್ಕಾಗಿ ಪ್ರಾರ್ಥಿಸಿ ಅಭಿಮಾನಿಯೊಬ್ಬರು 101 ರೂ.ಗಳ ಅಭಿಷೇಕ ಮಾಡಿಸಿದ್ದಾರೆ. ಪೂಜೆಯ ರಶೀದಿ ಈ ಟ್ವಿಟರ್‌ನಲ್ಲಿ ಓಡಾಡುತ್ತಿದೆ. ಆರ್‌ಸಿಬಿ ಅಭಿಮಾನಿ ಪೂಜೆಗಾಗಿ ವ್ಯಯಿಸಿದ್ದು 101 ರೂ. ಇರಬಹುದು. ಇದೊಂಥರಾ ಹುಚ್ಚುತನ ಅನ್ನಿಸಲೂಬಹುದು. ಆದರೆ ಆ ಪ್ರೀತಿಗೆ-ಅಭಿಮಾನಕ್ಕೆ ಬೆಲೆ ಕಟ್ಟಲಾದೀತೆ?

ಅಗ್ರ 3ನೇ ಸ್ಥಾನದಲ್ಲಿ ಆರ್‌ಸಿಬಿ
ಯುನೈಟೆಡ್ ಅರಬ್‌ನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್‌ಯ ಆರಂಭದಲ್ಲಿ ಆರ್‌ಸಿಬಿ ತಂಡ, ಕನ್ನಡಿಗರು ಹೆಚ್ಚಿರುವ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೀನಾಯ ಸೀಲು ಕಂಡು ಹಿನ್ನಡೆ ಕಂಡಿತ್ತಾದರೂ ಮತ್ತೆ ಗೆಲುವಿನ ದಾರಿಗೆ ಬಂದಿದೆ. ಆರ್‌ಸಿಬಿ ಈಗ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕ ಕಲೆ ಹಾಕಿದೆ.

ಆರ್‌ಸಿಬಿಗಿನ್ನು 5 ಪಂದ್ಯಗಳು ಬಾಕಿ!
ಐಪಿಎಲ್ ಲೀಗ್ ಹಂತಗಳಲ್ಲಿ ಪ್ರತೀ ತಂಡಗಳಿಗೂ ಒಟ್ಟು 14 ಪಂದ್ಯಗಳಿರುತ್ತದೆ. ಆರ್‌ಸಿಬಿ ಈಗಾಗಲೇ 9 ಪಂದ್ಯಗಳು ಆಡಿರುವುದರಿಂದ 5 ಪಂದ್ಯಗಳು ಬಾಕಿ ಉಳಿದಿದೆ. 21ರ ಅಕ್ಟೋಬರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 25 ಅಕ್ಟೋಬರ್‌ಗೆ ಚೆನ್ನೈ ಸೂಪರ್ ಕಿಂಗ್ಸ್, ಅಕ್ಟೋಬರ್ 28ಕ್ಕೆ ಮುಂಬೈ ಇಂಡಿಯನ್ಸ್, ಅಕ್ಟೋಬರ್ 31ಕ್ಕೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ, ನವೆಂಬರ್ 2ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸ್ಪರ್ಧಿಸಲಿದೆ.


Click it and Unblock the Notifications
