Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಸೂಪರ್ ಓವರ್‌ನಲ್ಲಿ ಕಡಿಮೆ ರನ್ ನೀಡಿದ ಬೌಲರ್‌ಗಳು

IPL 2020: Fewest Runs Scored In Super Over Batting First In IPL

ಐಪಿಎಲ್ ಕ್ರಿಕೆಟ್ ಟೂರ್ನಿ ಮತ್ತೊಂದು ರೋಮಾಂಚಕ ಪಂದ್ಯದ ಮೂಲಕ ಅಭಿಮಾನಿಗಳ ಮನತಣಿಸಿದೆ. ಆರ್‌ಸಿಬಿ ಗೆಲ್ಲುತ್ತದೆ ಎಂಬ ಪಂದ್ಯ ಮುಂಬೈ ಕಡೆ ವಾಲಿ, ಕೊನೆಗೆ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಮಡಿಲಿಗೆ ಬಿದ್ದಿದೆ. ಐಪಿಎಲ್ 2020 ಆರಂಭವಾದ ಎರಡನೆಯ ಪಂದ್ಯವೇ ಸೂಪರ್ ಓವರ್ ಆಗಿತ್ತು. ಆದರೆ ಮೊದಲ ಇನ್ನಿಂಗ್ಸ್ ಮುಗಿದಾಗಲೇ ಪಂದ್ಯದ ಫಲಿತಾಂಶ ಬಹುತೇಕ ಗೊತ್ತಾಗಿತ್ತು. ಆರ್‌ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದ ರೋಮಾಂಚಕತೆ ಸೂಪರ್ ಓವರ್‌ನ ಕೊನೆಯ ಎಸೆತದವರೆಗೂ ಇದ್ದಿದ್ದು ವಿಶೇಷ.

ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಪರ ಬೌಲಿಂಗ್ ಮಾಡಿದ ಹೊಸ ಪ್ರತಿಭೆ ನವದೀಪ್ ಸೈನಿ, ಕೀರಲ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಕೇವಲ ಏಳು ರನ್‌ಗೆ ನಿಯಂತ್ರಿಸಿದ್ದು ಸಣ್ಣ ಸಾಧನೆಯಲ್ಲ. ಮುಂದೆ ಓದಿ.

ಕಡಿಮೆ ರನ್ ದಾಖಲೆಗಳು

ಕಡಿಮೆ ರನ್ ದಾಖಲೆಗಳು

ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ದಾಖಲಾದ ಸೂಪರ್ ಓವರ್‌ಗಳಲ್ಲಿ ಮೊದಲು ಬೌಲಿಂಗ್ ಮಾಡಿ ಅತಿ ಕಡಿಮೆ ರನ್‌ ನೀಡಿರುವುದರಲ್ಲಿ ಸೈನಿ ಎಸೆದ ಓವರ್ ಕೂಡ ಸೇರಿದೆ. ಇದಕ್ಕೂ ಮುನ್ನ ಆರು ಎಸೆತಗಳಲ್ಲಿ ಕೇವಲ ಮೂರು ರನ್ ನೀಡಿದ್ದು, ಐಪಿಎಲ್‌ನಲ್ಲಿ ನಡೆದ ಸೂಪರ್ ಓವರ್‌ನಲ್ಲಿ ನೀಡಿದ ಅತಿ ಕಡಿಮೆ ರನ್. ಇದು ಕೂಡ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿಯೇ ದಾಖಲಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಗಿಸೋ ರಬಾಡ ಮೂರು ರನ್ ನೀಡಿದ್ದರು.

ಬೂಮ್ರಾಗೆ ಮೊದಲ ಸೋಲು

ಬೂಮ್ರಾಗೆ ಮೊದಲ ಸೋಲು

2019ರಲ್ಲಿ ಮುಂಬೈನ ಜಸ್‌ಪ್ರೀತ್ ಬೂಮ್ರಾ ಸರ್ ರೈಸರ್ಸ್ ಹೈದರಾಬಾದ್‌ಗೆ ಎಂಟು ರನ್ ಬಿಟ್ಟುಕೊಟ್ಟಿದ್ದರು. 2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂದ್ಯದಲ್ಲಿ ರಸ್ಟಿ ಥೆರಾನ್ 9 ರನ್ ನೀಡಿದ್ದರು. ಹಾಗೆಯೇ ಜಸ್‌ಪ್ರೀತ್ ಬೂಮ್ರಾ ಸೂಪರ್ ಓವರ್ ಬೌಲಿಂಗ್ ಮಾಡಿದಾಗ ಮುಂಬೈ ಇಂಡಿಯನ್ಸ್ ಕಂಡ ಮೊದಲ ಸೋಲು ಇದಾಗಿದೆ.

ಬೂಮ್ರಾ ಗೆಲುವಿಗೆ ಬ್ರೇಕ್

ಬೂಮ್ರಾ ಗೆಲುವಿಗೆ ಬ್ರೇಕ್

ಇದಕ್ಕೂ ಮುನ್ನ ಬೂಮ್ರಾ 2017ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಆರು ಎಸೆತದಲ್ಲಿ ಆರು ರನ್ ಮಾತ್ರ ತಂಡವನ್ನು ಗೆಲ್ಲಿಸಿದ್ದರು. ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ 2019ರಲ್ಲಿ ಎಂಟು ರನ್‌ಗೆ ಎರಡು ವಿಕೆಟ್ ಪಡೆದಿದ್ದರು. ಆ ಪಂದ್ಯವನ್ನು ಕೂಡ ಮುಂಬೈ ಜಯಿಸಿತ್ತು. ಆದರೆ ಈ ಬಾರಿ ಅವರಿಗೆ ಎದುರಾಳಿ ಪಡೆ ಎಂಟು ರನ್‌ಗಳ ಗುರಿ ತಲುಪುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ ಕೂಡ ಬೂಮ್ರಾ ಎರಡು ಬಾರಿ ಸೂಪರ್ ಓವರ್ ಬೌಲಿಂಗ್ ಮಾಡಿದ್ದು, ಎರಡು ಸಲವೂ ಭಾರತ ಗೆದ್ದಿದೆ.

ಅಧಿಕ ರನ್ ಗಳಿಸಿ ಟೈ ಆದ ಪಂದ್ಯಗಳು

ಅಧಿಕ ರನ್ ಗಳಿಸಿ ಟೈ ಆದ ಪಂದ್ಯಗಳು

ಐಪಿಎಲ್‌ನಲ್ಲಿ ಟೈನಲ್ಲಿ ಅಂತ್ಯಗೊಂಡ ಪಂದ್ಯಗಳ ಪೈಕಿ ಅತ್ಯಧಿಕ ರನ್ ಗಳಿಕೆಯ ಪಂದ್ಯ ಎಂಬ ಖ್ಯಾತಿಯೂ ಆರ್‌ಸಿಬಿ ಮತ್ತು ಮುಂಬೈ ಪಂದ್ಯಕ್ಕೆ ಸಿಕ್ಕಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳು ತಲಾ 201 ರನ್ ಗಳಿಸಿದ್ದವು. ಇದಕ್ಕೂ ಮುನ್ನ 2015ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ತಂಡದ ಪಂದ್ಯದಲ್ಲಿ ಉಭಯ ತಂಡಗಳು 191 ರನ್ ಗಳಿಸಿದ್ದವು. 2019ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಎರಡೂ ತಂಡಗಳು 185 ರನ್ ಗಳಿಸಿದ್ದವು.

Story first published: Wednesday, September 30, 2020, 14:58 [IST]
Other articles published on Sep 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+