
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 24ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ 2 ರನ್‌ಗಳಿಂದ ಗೆದ್ದಿತ್ತು. ಕೆಕೆಆರ್‌ಗೆ ಇದು ಟೂರ್ನಿಯ 4ನೇ ಗೆಲುವಾದರೆ, ಪಂಜಾಬ್‌ಗೆ ಟೂರ್ನಿಯ 6ನೇ ಸೋಲಿನ ಮುಖಭಂಗ.
ಕೋಲ್ಕತ್ತಾ ಪರ ಶುನ್‌ಮನ್ ಗಿಲ್ 57, ಇಯಾನ್ ಮಾರ್ಗನ್ 24, ದಿನೇಶ್ ಕಾರ್ತಿಕ್ 58 ರನ್ ಸೇರಿಸಿದ್ದರಿಂದ ಮೊದಲ ಇನ್ನಿಂಗ್ಸ್ ಆಡಿದ್ದ ಕೆಕೆಆರ್ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 164 ರನ್ ಗಳಿಸಿತ್ತು. ಪಂಜಾಬ್ ತಂಡ ನಾಯಕ ಕೆಎಲ್ ರಾಹುಲ್ 74, ಮಯಾಂಕ್ ಅಗರ್ವಾಲ್ 56 ರನ್ ಹೊರತಾಗಿಯೂ ಪಂದ್ಯ ಸೋತಿತು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗೆ ಅತೀ ಕಡಿಮೆ ರನ್‌ಗೆ ಪಂದ್ಯ ಗೆದ್ದ ದಾಖಲೆಗಳು ಹಿಂದೆಯೂ ನಡೆದಿದೆ. ಈ ಹಿಂದೆ 2014ರಲ್ಲಿ ಶಾರ್ಜಾ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ 2 ರನ್‌ನಿಂದ ಗೆದ್ದಿತ್ತು.
ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಅಂದರೆ 2008ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 5 ರನ್‌ಗಳ ವಿಜಯ ಸಂಭ್ರಮಿಸಿತ್ತು. ಶನಿವಾರದ ಗೆಲುವು ಮೂರನೇ ದಾಖಲೆಯಾಗಿ ಗುರುತಿಸಿಕೊಂಡಿದೆ.