Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

12 ವರ್ಷಗಳ 'ಪ್ರಶಸ್ತಿ' ಬರ ನೀಗಿಸಲು ಡೆಲ್ಲಿ ಕ್ಯಾಪಿಟಲ್ಸ್‌ಗಿದು ಸುವರ್ಣಾವಕಾಶ

IPL 2020 Final: Delhis golden chance to break their 12-year title jinx

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ 11 ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ. ಈ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಫೈನಲ್‌ಗೆ ಪ್ರವೇಶಿಸಿರುವುದರಿಂದ ತನ್ನ ಹೆಸರಿನಲ್ಲಿರುವ ಕೆಟ್ಟ ದಾಖಲೆ ಬದಿಗಿರಿಸಲು ಡೆಲ್ಲಿಗೆ ಅಪೂರ್ವ ಅವಕಾಶ ಲಭಿಸಿದೆ.

ಮಂಗಳವಾರ (ನವೆಂಬರ್ 10) ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ. ಕಪ್‌ ಗೆಲ್ಲದೆ 12 ವರ್ಷಗಳ ಕಾಲ ಕಾದ ಡೆಲ್ಲಿ ಕನಸು ನನಸಾಗಲಿದೆ. ಡೆಲ್ಲಿ ತಂಡ ಐಪಿಎಲ್ ಫೈನಲ್‌ಗೆ ಪ್ರವೇಶಿಸುತ್ತಿರುವುದೇ ಇದು ಮೊದಲ ಸಾರಿ.

ಐಪಿಎಲ್‌ನಲ್ಲಿ ಅತೀ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಕಳೆದ ವರ್ಷವೂ ಸೇರಿ ಒಟ್ಟಿಗೆ ನಾಲ್ಕು ಬಾರಿ ಟ್ರೋಫಿ ಗೆದ್ದಿದೆ. ಮುಂಬೈ ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದೆ. ಡೆಲ್ಲಿ ಗೆದ್ದರೆ ಫ್ರಾಂಚೈಸಿ ಹೆಸರಿನಲ್ಲಿ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ಕ್ವಾಲಿಫೈಯರ್ 1 ಪಂದ್ಯ ಕೂಡ ಸೇರಿ ಹಿಂದಿನ ಮೂರು ಪಂದ್ಯಗಳಲ್ಲಿ ಮುಂಬೈ ತಂಡ ಡೆಲ್ಲಿ ವಿರುದ್ಧ ಮೇಲುಗೈ ಸಾಧಿಸಿರುವುದರಿಂದ ಮುಂಬೈ ಆತ್ಮವಿಶ್ವಾಸ ಹೆಚ್ಚಿದೆ. ಹಾಗಂತ ಯುವಕರ ತಂಡ ಡೆಲ್ಲಿ ಕೂಡ ಬಲಿಷ್ಠವಾಗಿದೆ. ಟ್ರೊಫಿ ಗೆಲ್ಲಬೇಕು ಅನ್ನೋ ಕಾರಣಕ್ಕೆ ಡೆಲ್ಲಿ ತನ್ನ ಹೆಸರನ್ನು ಡೆಲ್ಲಿ ಡೇರ್‌ ಡೆವಿಲ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಿಸಿಕೊಂಡಿತ್ತು.

Story first published: Tuesday, November 10, 2020, 16:22 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+