
ಫೈನಲ್ ಪಂದ್ಯದ ಸಮಯ ಹಾಗೂ ನೇರಪ್ರಸಾರ
13ನೇ ಆವೃತ್ತಿಯ ಐಪಿಎಲ್‌ನ ಫೈನಲ್ ಪಂದ್ಯ ನವೆಂಬರ್ 10, ಮಂಗಳವಾರ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಮುಖಾಮುಖಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಹೋರಾಟವನ್ನು ನಡೆಸಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಹಾಗೂ ಹಾಟ್ ಸ್ಟಾರ್‌ನಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಡೆಲ್ಲಿ ಫ್ರಾಂಚೈಸಿಗೆ ಚೊಚ್ಚಲ ಫೈನಲ್
ಐಪಿಎಲ್ ಫೈನಲ್‌ನಲ್ಲಿ ಎಲ್ಲಾ ತಂಡಗಳ ಮೊದಲ ಫೈನಲ್ ಪ್ರವೇಶದ ವರ್ಷ
ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ - 2008
ಡೆಕ್ಕನ್ ಚಾರ್ಜರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು - 2009
ಮುಂಬೈ ಇಂಡಿಯನ್ಸ್ - 2010
ಕೋಲ್ಕತಾ ನೈಟ್ ರೈಡರ್ಸ್ - 2012
ಕಿಂಗ್ಸ್ ಇಲೆವೆನ್ ಪಂಜಾಬ್ - 2014
ಡೆಲ್ಲಿ ಕ್ಯಾಪಿಟಲ್ಸ್ - 2020

ಪ್ರತಿ ತಂಡಗಳ ಫೈನಲ್ ಪಂದ್ಯದ ಅಂಕಿಅಂಶಗಳು
ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಫೈನಲ್ ಪ್ರವೇಶವನ್ನು ಪಡೆದುಕೊಂಡ ತಂಡವೆನಿಸಿಕೊಂಡಿದೆ. 8 ಬಾರಿ ಚೆನ್ನೈ ಪ್ರವೇಶ ಪಡೆದುಕೊಂಡಿದ್ದರೆ 6ನೇ ಬಾರಿಗೆ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿರುವ ಮುಂಬೈ ಎರಡನೇ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್, 8 ಫೈನಲ್ಸ್: ಗೆಲುವು - 3, ಸೋಲು - 5
ಮುಂಬೈ ಇಂಡಿಯನ್ಸ್, 6 ಫೈನಲ್ಸ್: ಗೆಲುವು - 4, ಸೋಲು - 1 (ಐಪಿಎಲ್ 2020 ಫಲಿತಾಂಶ ಕಾಯುತ್ತಿದೆ)
ರಾಯಲ್ ಚಾಲೆಂಜರ್ಸ್ ಬೆಂಗಳೂರು, 3 ಫೈನಲ್ಸ್ : ಗೆಲುವು - 0, ಸೋಲು - 3
ಕೋಲ್ಕತಾ ನೈಟ್ ರೈಡರ್ಸ್, 2 ಫೈನಲ್ಸ್: ಗೆಲುವು- 2, ಸೋಲು - 0
ಸನ್‌ರೈಸರ್ಸ್ ಹೈದರಾಬಾದ್, 2 ಫೈನಲ್ಸ್: ಗೆಲುವು - 1, ಸೋಲು - 1
ಡೆಕ್ಕನ್ ಚಾರ್ಜರ್ಸ್, 1 ಫೈನಲ್: ಗೆದ್ದರು - 1
ಕಿಂಗ್ಸ್ ಇಲೆವೆನ್ ಪಂಜಾಬ್, 1 ಫೈನಲ್: ಸೋಲು - 1
ರಾಜಸ್ಥಾನ್ ರಾಯಲ್ಸ್, 1 ಫೈನಲ್, ಗೆಲುವು - 1
ರೈಸಿಂಗ್ ಪುಣೆ ಸೂಪರ್‌ಜೈಂಟ್, 1 ಫೈನಲ್, ಸೋಲು - 1
ದೆಹಲಿ ರಾಜಧಾನಿಗಳು - 1 ಫೈನಲ್ (ಐಪಿಎಲ್ 2020 ಫಲಿತಾಂಶ ಕಾಯುತ್ತಿದೆ)

ಫ್ಲೇಆಫ್‌ನಲ್ಲಿ ಡೆಲ್ಲಿ ಫೆವರಿಟ್ ಅಲ್ಲ
ಐಪಿಎಲ್ ಪ್ಲೇಆಫ್ ಅಥವಾ ನಾಕ್‌ಔಟ್ ಹಂತದಲ್ಲಿ ಡೆಲ್ಲಿ ಮೂಲದ ತಂಡ 8 ಪಂದ್ಯಗಳನ್ನು ಆಡಿದೆ. ಆದರೆ ಇದರಲ್ಲಿ ಗೆಲುವು ಸಾಧಿಸಿರುವುದು ಕೇವಲ 2 ಮಾತ್ರ. ಈ ಎರಡು ಗೆಲುವು ಕೂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೇ ದಾಖಲಾಗಿದೆ ಎಂಬುದು ವಿಶೇಷ. 2019 ಐಪಿಎಲ್‌ನಲ್ಲಿ ವೈಝಾಗ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ನಲ್ಲಿ ಡೆಲ್ಲಿ ಗೆದ್ದಿತ್ತು.
ಐಪಿಎಲ್ ಟ್ರೋಫಿ ಗೆದ್ದ ತಂಡದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಲಿ ಸದಸ್ಯರು
ಶಿಖರ್ ಧವನ್ (2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್)
ಆರ್ ಅಶ್ವಿನ್ (2010, 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್)
ಆಕ್ಷರ್ ಪಟೇಲ್ (2013 ರಲ್ಲಿ ಮುಂಬೈ ಇಂಡಿಯನ್ಸ್)

ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ಹೋರಾಟ
ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಆಟಗಾರರು ಪಡೆಯುವ ಪರ್ಪಲ್ ಕ್ಯಾಟ್‌ಗಾಗಿ ಕಗಿಸೋ ರಬಡಾ ಹಾಗೂ ಜಸ್ಪ್ರೀತ್ ಬೂಮ್ರಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಬೂಮ್ರಾ ತಲೆಯಲ್ಲಿದ್ದ ಪರ್ಪಲ್ ಕ್ಯಾಪ್‌ಅನ್ನು ರಬಡಾ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ತಮ್ಮ ಬಳಿ ಮತ್ತೊಮ್ಮೆ ಇರಿಸಿಕೊಂಡಿದ್ದಾರೆ. ಎರಡು ಹೆಚ್ಚಿನ ವಿಕೆಟ್ ಪಡೆದು ರಬಡಾ ಮುನ್ನಡೆಯಲ್ಲಿದ್ದಾರೆ. ಇನ್ನು ಆರೆಂಜ್ ಕ್ಯಾಪ್ ಕೆಎಲ್ ರಾಹುಲ್ ಬಳಿಯಲ್ಲೇ ಇದೆ. ರಾಹುಲ್ 670 ರನ್ ಗಳಿಸಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಧವನ್ 603 ರನ್ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ 68 ರನ್ ಗಳಿಸಲು ಧವನ್ ಯಶಸ್ವಿಯಾದರೆ ಆರೆಂಜ್ ಕ್ಯಾಪ್ ಧವನ್ ಪಾಲಾಗಲಿದೆ.


Click it and Unblock the Notifications
