
ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ. ಈ ಹಣಾಹಣಿಯಲ್ಲಿ ಈ ಬಾರಿಯ ಚಾಂಪಿಯನ್ ಯಾರಾಗಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಐದನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿರುವ ಮುಂಬೈ ಗೆಲುವಿನ ಫೇವರೀಟ್ ಎನಿಸಿಕೊಂಡಿದ್ದರೆ ಚೊಚ್ಚಲ ಬಾರಿಗೆ ಗೆಲ್ಲಿವ ವಿಶ್ವಾಸದಲ್ಲಿ ಡೆಲ್ಲಿ ಹುಡುಗರು ಇದ್ದಾರೆ.
ಇನ್ನು ಈ ಫೈನಲ್ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಈ ಮಹತ್ವದ ಕ್ರೀಡಾಕೂಟ ಫೈನಲ್ ಪಂದ್ಯಕ್ಕೆ ವೇದಿಕೆಯಾಗಿರಲಿದೆ. ಈ ಮೂಲಕ ಈ ಬಾರಿಯ ಆವೃತ್ತಿ ಯಶಸ್ವಿಯಾಗಿ ಅಂತ್ಯವಾಗಲಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಹಂತದವರೆಗೆ ಈ ಎರಡು ತಂಡಗಳು ಮೂರು ಬಾರಿ ಮುಖಾಮುಖಿಯಾಗಿದೆ. ಆದರೆ ಈ ಮೂರು ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದೆ. ಇದು ಮುಂಬೈ ಪಾಲಿಗೆ ಸಕಾರಾತ್ಮಕ ಸಂಗತಿಯಾಗಿದೆ. ಆದರೆ ಫೈನಲ್ ಪಂದ್ಯದಲ್ಲಿ ತಿರುಗಿ ಬೀಳುವ ವಿಶ್ವಾಸದಲ್ಲಿ ಡೆಲ್ಲಿ ತಂಡ ಇದೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಕೃಣಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್ / ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಾಹರ್, ಟ್ರೆಂಟ್ ಬೋಲ್ಟ್, ಜಸ್ಪ್ರೀತ್ ಬೂಮ್ರ
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಮಾರ್ಕಸ್ ಸ್ಟೊಯಿನಿಸ್, ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮಿಯರ್, ಆಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀಣ್ ದುಬೆ, ಕಗಿಸೊ ರಬಾಡಾ, ಅನ್ರಿಕ್ ನಾರ್ಕಿಯಾ