Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಫೈನಲ್: ಮುಂಬೈಗೆ ಸಾಧಾರಣ ರನ್ ಗುರಿ ನೀಡಿದ ಡೆಲ್ಲಿ

IPL 2020 Final: Mumbai Indians vs Delhi Capitals, first innings report

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕಾದಾಡುತ್ತಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ 156 ರನ್ ಗುರಿ ನೀಡಿದೆ.

ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್‌ನ ಟಾಪ್ ಬ್ಯಾಟಿಂಗ್ ಆರ್ಡರ್‌ನಿಂದ ಉತ್ತಮ ಬ್ಯಾಟಿಂಗ್ ಬರಲಿಲ್ಲ. ಮಾರ್ಕಸ್ ಸ್ಟೋಯ್ನಿಸ್ ೦, ಶಿಖರ್ ಧವನ್ 15, ಅಜಿಂಕ್ಯ ರಹಾನೆ 2, ರಿಷಭ್ ಪಂತ್ 56 (38 ಎಸೆತ), ಶಿಮ್ರನ್ ಹೆಟ್ಮೈಯರ್ 5, ಅಕ್ಸರ್ ಪಟೇಲ್ 9, ಶ್ರೇಯಸ್ ಐಯ್ಯರ್ 65 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 156 ರನ್ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಟ್ರೆಂಟ್ ಬೌಲ್ಟ್ 3, ಜಯಂತ್ ಯಾದವ್ 1, ನಾಥನ್ ಕೌಲ್ಟರ್ ನೈಲ್ 2 ವಿಕೆಟ್ ಪಡೆದರು. ಐಪಿಎಲ್ ಫೈನಲ್‌ಗೆ ಡೆಲ್ಲಿ ಇದೇ ಮೊದಲ ಬಾರಿ ಪ್ರವೇಶಿಸಿದೆ. ಫೈನಲ್‌ನಲ್ಲಿ ಗೆದ್ದರೆ ಡೆಲ್ಲಿ ಹೆಸರಿನಲ್ಲಿ ಇತಿಹಾಸ ನಿರ್ಮಾಣವಾಗಲಿದೆ.

ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಆದರೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲುವ ಅವಕಾಶವಿದೆ. ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದ ರೋಹಿತ್ ಶರ್ಮಾ 200ನೇ ಪಂದ್ಯವಾಡಿದಂತಾಗಿದೆ.

Story first published: Tuesday, November 10, 2020, 21:23 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+