ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!

ಬೆಂಗಳೂರು, ಜನವರಿ 7: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿಯ ಆರಂಭ ಮತ್ತು ಅಂತ್ಯದ ದಿನಾಂಕ ಪ್ರಕಟಗೊಂಡಿದೆ. ಆರಂಭಿಕ ಪಂದ್ಯ ಮಾರ್ಚ್ 29ರಂದು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮೇ 24ರಂದು ನಡೆಯಲಿದೆ.
ಸುಮಾರು 57 ದಿನಗಳ ಈ ಅದ್ದೂರಿ ಟೂರ್ನಿ ಪ್ರತಿದಿನ 7.30 pmಗೆ ಆರಂಭಗೊಳ್ಳಲಿದೆ. ಅಂದರೆ ಇದರರ್ಥ ಈ ಬಾರಿ ದಿನಕ್ಕೊಂದು ಪಂದ್ಯ ನಡೆಯಲಿದೆ. ಭಾರತದ ಕ್ರಿಕೆಟ್ ಪ್ರಸಾರಕ ಮತ್ತು ಹಿಂದಿನ ಸೀಸನ್‌ನಲ್ಲಿ ಪಂದ್ಯ ತಡವಾಗಿ ಮುಗಿಯುತ್ತಿದ್ದುದನ್ನು ಗಮನದಲ್ಲಿಟ್ಟುಕೊಂಡು ಪಂದ್ಯವನ್ನು 7.30 pmಗೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ದಿನಕ್ಕೆರಡು ಪಂದ್ಯಗಳು ನಡೆಯುವಂತಿದ್ದರೆ 4 pmಗೆ ಒಂದು ಪಂದ್ಯ ನಡೆಯುವುದರಲ್ಲಿತ್ತು. ಆದರೆ 4 pmಕ್ಕೆ ಪಂದ್ಯದ ಪ್ರಸಾರ ಸಮಯ ಪ್ರಸಾರಕರಿಗೂ ಸರಿಕಂಡಿಲ್ಲ. ಅಲ್ಲದೆ ತಂಡಗಳ ಆದಾಯ ಹೊಂದಾಣಿಕೆಗೂ 4 pm ಆರಂಭಿಕ ಸಮಯ ತೊಂದರೆಯಾಗಿ ಪರಿಣಮಿಸಲಿದೆ. ಇದಕ್ಕಾಗಿ ಈ ಬಾರಿ ದಿನಕ್ಕೊಂದು ಪಂದ್ಯ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
'ಪಂದ್ಯದ ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ. ಆದರೆ ಟೂರ್ನಿ ಮಾರ್ಚ್ 29ರಂದು ಆರಂಭಗೊಂಡರೆ ಫೈನಲ್ ಪಂದ್ಯ ಮೇ 24ರಂದು ನಡೆಯಲಿದೆ. ಈ ಬಾರಿ 45ಕ್ಕೂ ಹೆಚ್ಚಿನ ದಿನಗಳ ಕಾಲ ಟೂರ್ನಿ ನಡೆಯಲಿದೆ. ಅಂದರೆ ದಿನಕ್ಕೊಂದು ಪಂದ್ಯ ನಡೆಸಲು ಅಡ್ಡಿಯಿಲ್ಲ ಅನ್ನೋದು ಇದರರ್ಥ,' ಎಂದು ಮೂಲವೊಂದು ತಿಳಿಸಿದೆ.
ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದಿದ್ದ ಐಪಿಎಲ್ 2019ರ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಮುಂಬೈ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಷ್ಟೇ ಅಲ್ಲ, ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿ ಮುಂಬೈ (4 ಬಾರಿ) ಚೆನ್ನೈಯನ್ನು (3 ಬಾರಿ) ಮೀರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications