ಐಪಿಎಲ್ 2020, ಫೈನಲ್: ವೈಯಕ್ತಿಕ ಮೈಲಿಗಲ್ಲಿನ ಸಮೀಪದಲ್ಲಿದ್ದಾರೆ ರಹಾನೆ, ಕೃನಾಲ್, ಐಯ್ಯರ್, ಧವನ್

ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಇಂದು ಕಣಕ್ಕಿಳಿಯುತ್ತಿದೆ. ಟ್ರೋಫಿ ಯಾರ ಪಾಲಾಗಲಿದೆ ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಲಭಿಸಲಿದೆ. ಈ ಮಧ್ಯೆ ಇಂದಿನ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ಎರಡು ತಂಡಗಳ ಕೆಲ ಆಟಗಾರರು ವಿಶೇಷ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ.
ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದರೆ ಅದು ಮುಂಬೈ ಪಾಲಿಗೆ 5ನೇ ಟ್ರೋಫಿಯಾಗಿರಲಿದೆ. ಡೆಲ್ಲಿ ಗೆಲುವು ಸಾಧಿಸಿದರೆ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಸಾಧನೆ ಮಾಡಲಿದೆ.
ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಲೀಗ್ ಹಂತದ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿತ್ತು. ಡೆಲ್ಲಿ ವಿರುದ್ಧ ಲೀಗ್ ಹಾಗೂ ಪ್ಲೇ ಆಫ್‌ನಲ್ಲಿ ಮೂರು ಬಾರಿಯ ಮುಖಾಮುಖಿಯಾದಾಗಲೂ ಮುಂಬೈ ಗೆಲುವು ಕಂಡಿತ್ತು. ಇಂದಿನ ಪಂದ್ಯದಲ್ಲೂ ಗೆಲ್ಲುವ ಮೂಲಕ 4-0ಗೆ ಗೆಲುವಿನ ಅಂತರವನ್ನು ಸೇರಿಸಿಕೊಳ್ಳುವ ವಿಶ್ವಾಸದಲ್ಲಿದೆ ಮುಂಬೈ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಆಟಗಾರರು ಸಾಧಿಸಲು ಸಾಧ್ಯತೆಯಿರುವ ಮೈಲಿಗಲ್ಲುಗಳು ಹೀಗಿದೆ:
* ಅಜಿಂಕ್ಯಾ ರಹಾನೆ ಇಂದಿನ ಪಂದ್ಯದಲ್ಲಿ 69 ರನ್ ಗಳಿಸಿದರೆ 4000 ಐಪಿಎಲ್ ರನ್ ಗಳಿಸಿದಂತಾಗಲಿದೆ.
* ಕೃನಾಲ್ ಪಾಂಡ್ಯ 1000 ಐಪಿಎಲ್ ರನ್ ಗಳಿಸಲು ಇನ್ನು ಕೇವಲ 1 ರನ್‌ನ ಅಗತ್ಯವಿದೆ. 5 ಬೌಂಡರಿ ಬಾರಿಸಿದರೆ 100ನೇ ಐಪಿಎಲ್ ಬೌಂಡರಿಯಾಗಿರಲಿದೆ. 4 ವಿಕೆಟ್ ಪಡೆದರೆ 50 ವಿಕೆಟ್ ಕಬಳಿಸಂತಾಗಲಿದೆ.
* ಶಿಖರ್ ಧವನ್ 36 ರನ್ ಗಳಿಸಿದರೆ ಡೆಲ್ಲಿ ತಂಡದ ಪರವಾಗಿ 1500 ರನ್ ಗಳಿಸಿದಂತಾಗಲಿದೆ. 68 ರನ್ ಗಳಿಸಿದರೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಲಿದ್ದಾರೆ.
* ಶ್ರೇಯಸ್ ಐಯ್ಯರ್ ಐಪಿಎಲ್ 2020ಯಲ್ಲಿ 500 ರನ್ ಗಳಿಸಲು 46 ರನ್‌ಗಳ ಅವಶ್ಯಕತೆಯಿದೆ.
* ಕ್ವಿಂಟನ್ ಡಿಕಾಕ್ 61 ನ್ ಗಳಿಸಿದರೆ ಐಪಿಎಲ್‌ನಲ್ಲಿ 2000 ರನ್ ಗಳಿಸಿದಂತಾಗಲಿದೆ. 2 ಬೌಂಡರಿ ಸಿಡಿಸಿದರೆ 200ನೇ ಬೌಂಡರಿಯಾಗಿರಲಿದೆ.
* ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿ ಐಪಿಎಲ್‌ನ 100 ಸಿಕ್ಸರ್ ದಾಖಲಾಗಲು ಇಂದಿನ ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಬೇಕಿದೆ.
* ರೋಹಿತ್ ಶರ್ಮಾ 8 ರನ್ ಗಳಿಸಿದರೆ ಮುಂಬೈ ಪರವಾಗಿ ಐಪಿಎಲ್‌ನಲ್ಲಿ 4000ರನ್ ಗಳಿಸಿದಾಂತಾಗಲಿದೆ. 43 ರನ್ ಗಳಿಸಿದರೆ ನಾಯಕನಾಗಿ 3000 ರನ್ ದಾಖಲಿಸಲಿದ್ದಾರೆ.
* ಕಿರಾನ್ ಪೊಲಾರ್ಡ್ 2 ಸಿಕ್ಸರ್ ಬಾರಿಸಿದರೆ ಐಪಿಎಲ್‌ನ 200ನೇ ಸಿಕ್ಸರ್ ಬಾರಿಸಿದಂತಾಗಲಿದೆ. 6 ಬೌಂಡರಿ ಬಾರಿಸಿದರೆ 200ನೇ ಐಪಿಎಲ್ ಬೌಂಡರಿ ಸಿಡಿಸಿದಂತಾಗಲಿದೆ.
* ಇಶಾನ್ ಕಿಶನ್ ಕೂಡ ಟೂರ್ನಿಯಲ್ಲಿ 500 ರನ್ ಗಳಿಸುವ ಸನಿಹದಲ್ಲಿದ್ದು 3 ಬೌಂಡರಿ ಸಿಡಿಸಿದರೆ 100 ಐಪಿಎಲ್ ಬೌಂಡರಿ ಪೂರ್ಣಗೊಳಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications