ಐಪಿಎಲ್ 2020: 13ನೇ ಆವೃತ್ತಿಯಲ್ಲಿ ಪ್ರಶಸ್ತಿ ಪಡೆದ ಸಂಪೂರ್ಣ ಆಟಗಾರರ ಪಟ್ಟಿ

ಐಪಿಎಲ್ 13ನೇ ಆವೃತ್ತಿ ಅಭೂತಪೂರ್ವವಾಗಿ ಅಂತ್ಯವಾಗಿದೆ. ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿಗೆ ಸೋಲಿನ ರುಚಿ ತೋರಿಸುವ ಮೂಲಕ ಐದನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಪಡೆದ ದಾಖಲೆಯನ್ನು ವಿಸ್ತರಿಸಿಕೊಂಡಿದೆ.
ಈ ಪಂದ್ಯಾವಳಿಯಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಫೈನಲ್ ಪಂದ್ಯದ ಬಳಿಕ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ ಆ ಪ್ರಶಸ್ತಿ ವಿತರಣೆಯಾಗಿದೆ. ಐಪಿಎಲ್ ಟ್ರೋಫಿ ಹಂಚಿಕೆಗೂ ಮುನ್ನ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಯಾರೆಲ್ಲಾ ಯಾವ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂಬ ಕುತೂಹಲ ನಿಮಗೂ ಇರಬಹುದು. ಆ ಆಟಗಾರರ ಪಟ್ಟಿ ಇಲ್ಲಿದೆ..

ಉದಯೋನ್ಮುಖ ಆಟಗಾರ: ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದು ಆರ್‌ಸಿಬಿ ಪರವಾಗಿ ಅದ್ಭುತ ಪ್ರದರ್ಶ ನೀಡಿದರು. 15 ಪಂದ್ಯಗಳಲ್ಲಿ ಪಡಿಕ್ಕಲ್ 473 ರನ್ ಗಳಿಸಿದ್ದಾರೆ. ಪಡಿಕ್ಕಲ್ ಅವರ ಈ ಪ್ರದರ್ಶನ ಆರ್‌ಸಿಬಿ ತಂಡ ಹಲವು ವರ್ಷಗಳಿಂದ ಎದುರಿಸುತ್ತಿದ್ದ ಉತ್ತಮ ಆರಂಭಿಕ ಆಟಗಾರನ ಕೊರತೆಯನ್ನು ನೀಗಿಸಿದೆ. ಈ ಒಟ್ಟಾರೆ ಪ್ರದರ್ಶನಕ್ಕಾಗಿ ಪಡಿಕ್ಕಲ್ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೇರ್‌ಪ್ಲೇ ಅವಾರ್ಡ್: ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೆ ಗರಿಯಂತೆ ಫೇರ್‌ಪ್ಲೇ ಅವಾರ್ಡ್ ಕೂಡ ತನ್ನದಾಗಿಸಿಕೊಂಡಿದೆ. ಮೈದಾನದೊಳಗಡೆ ನ್ಯಾಯೋಚಿತ ನಡವಳಿಕೆಗಾಗಿ ಈ ಪ್ರಶಸ್ತಿಯನ್ನು ನಿಡಲಾಗುತ್ತದೆ. ಮುಂಬೈ ಚಾಂಪಿಯನ್ ಪಟ್ಟಕ್ಕೇರುವ ಜೊತೆಗೆ ಈ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.

ಗೇಮ್‌ಚೇಂಜರ್ ಆಫ್ ಐಪಿಎಲ್: ಕೆಎಲ್ ರಾಹುಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಿದ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನವನ್ನು ನೀಡಿ 14 ಪಂದ್ಯಗಳಿಂದ 670 ರನ್ ಗಳಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಹುಲ್ ಭರ್ಜರಿ ಶತಕವನ್ನೂ ಸಿಡಿಸಿದ್ದಾರೆ. ಪಂಜಾಬ್ ಗೆಲುವು ಕಂಡ ಪಂದ್ಯಗಳಲ್ಲಿ ರಾಹುಲ್ ಪಾತ್ರ ಮಹತ್ವದ್ದಾಗಿತ್ತು.

ಸೂಪರ್ ಸ್ಟ್ರೈಕರ್: ಕಿರಾನ್ ಪೊಲಾರ್ಡ್
ಕಿರಾನ್ ಪೊಲಾರ್ಡ್ 16 ಪಂದ್ಯಗಳಲ್ಲಿ ಆಡಿ 268 ರನ್ ಗಳಿಸಿದ್ದಾರೆ. ಆದರೆ ಪೊಲಾರ್ಡ್ 191.42ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವುದು ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರಲು ಕಾರಣವಾಗಿದೆ. ಈ ಭರ್ಜರಿ ಪ್ರದರ್ಶನಕ್ಕಾಗಿ ಸೂಪರ್ ಸ್ಟ್ರೈಕರ್ ಪ್ರಶಸ್ತಿ ಕಿರಾನ್ ಪೊಲಾರ್ಡ್ ಪಾಲಿಗೆ ದಕ್ಕಿದೆ.

ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್- ಇಶಾನ್ ಕಿಶನ್
ಇಶಾನ್ ಕಿಶನ್ ಈ ಬಾರು ಮುಂಬೈ ಇಂಡಿಯನ್ಸ್ ಪರವಾಗಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಜೊತೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿದ್ದಾರೆ. 30 ಸಿಕ್ಸರ್‌ಗಳನ್ನು ಸಿಡಿಸಿ ಇಶಾನ್ ಕಿಶನ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಪವರ್‌ಪ್ಲೇಯರ್: ಟ್ರೆಂಟ್ ಬೋಲ್ಟ್
ಜಸ್ಪ್ರಿತ್ ಬೂಮ್ರಾ ಜೊತೆಗೆ ಮುಂಬೈ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಮೊನಚು ನೀಡಿದ್ದು ಟ್ರೆಂಟ್ ಬೋಲ್ಟ್. ಪವರ್‌ಪ್ಲೇನಲ್ಲಿ ಅತಿ ಹೆಚ್ಚಿ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಮುಂಬೈಗೆ ಆರಂಭದಲ್ಲೇ ಯಶಸ್ಸು ದೊರಕಲು ಕಾರಣರಾಗಿದ್ದಾರೆ. ಇದಕ್ಕಾಗಿ ಪವರ್‌ಪ್ಲೇಯರ್ ಪ್ರಶಸ್ತಿ ಬೋಲ್ಟ್ ಮುಡಿಗೇರಿದೆ.

ಪರ್ಪಲ್ ಕ್ಯಾಪ್: ಕಗಿಸೋ ರಬಡಾ
ಈ ಬಾರಿಯ ಪರ್ಪಲ್ ಕ್ಯಾಪ್ ಯಾರ ಮುಡಿಗೇರಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಕಗಿಸೋ ರಬಡಾ ಹಾಗೂ ಜಸ್ಪ್ರೀತ್ ಬೂಮ್ರಾ ಜಿದ್ದಾಜಿದ್ದಿನ ಹೋರಾಟವನ್ನು ನಡೆಸಿದ್ದರು. ಅಂತಿಮ ಪಂದ್ಯದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿದ ರಬಡಾ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಈ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.

ಆರೆಂಜ್ ಕ್ಯಾಪ್: ಕೆಎಲ್ ರಾಹುಲ್
ಟೂರ್ನಿಯಲ್ಲಿ ಆರಂಭದಿಂದಲೂ ರನ್ ಗಳಿಕೆಯಲ್ಲಿ ಕೆಎಲ್ ರಾಹುಲ್ ಮುಂದಿದ್ದದು. ಪ್ಲೇಆಫ್‌ನಿಂದಲೇ ತಂಡ ಹಿರಬಿದ್ದರೂ ರಾಹುಲ್ ರನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗಿಲ್ಲ. 14 ಪಂದ್ಯಗಳಲ್ಲಿ ರಾಹುಲ್ 670 ರನ್ ಗಳಿಸಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡರು.

ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್: ಜೋಫ್ರಾ ಆರ್ಚರ್
ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಅಸ್ತ್ರ ಜೋಫ್ರಾ ಆರ್ಚರ್ ಟೂರ್ನಿಯಲ್ಲಿ 20 ವಿಕೆಟ್ ಕಿತ್ತು ಮಿಂಚಿದ್ದಾರೆ. ಮಾತ್ರವಲ್ಲಿದೆ ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕವೂ ಆರ್ಚರ್ ತಂಡಕ್ಕೆ ನೆರವಾಗಿದ್ದಾರೆ. ಇದಕ್ಕಾಗಿ ಮೋಸ್ಟ್ ವ್ಯಾಲ್ಯುಯೇಬರ್ ಆಟಗಾರ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications