ಐಪಿಎಲ್ 2020: ವಿನ್ನರ್, ರನ್ನರ್ ಹಾಗೂ ಪ್ರಶಸ್ತಿ ಪಡೆದ ಆಟಗಾರರಿಗೆ ದೊರೆತ ಪ್ರಶಸ್ತಿ ಮೊತ್ತವೆಷ್ಟು?

ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಎರಡನೇ ತಂಡವಾಗಿದೆ. ಈ ಮೂಲಕ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ರೊಹಿತ್ ಶರ್ಮಾ ನೇತೃತ್ವದ ಮುಂಬೈ ಟೂರ್ನಿಯುದ್ದಕ್ಕೂ ನೀಡಿದ ಅದ್ಭುತ ಪ್ರದರ್ಶನವನ್ನು ಫೈನಲ್ ಪಂದ್ಯದಲ್ಲೂ ಮುಂದುವರಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಮೂಲಕ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ದಾಖಲೆಯನ್ನು ವಿಸ್ತರಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಚೆನ್ನೈ 3 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕ್ಏರಿದ ತಂಡ, ರನ್ನರ್ ಅಪ್, 3 ಹಾಗೂ 4ನೇ ಸ್ಥಾನವನ್ನು ಪಡೆದ ತಂಡ ಹಾಗೂ ಇತರ ಪ್ರಮುಖ ಪ್ರಶಸ್ತಿ ಪಡೆದ ಆಟಗಾರರು ಟ್ರೋಫಿಯ ಜೊತೆಗೆ ಉತ್ತಮ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ತನ್ನ ಪ್ರದರ್ಶನಕ್ಕೆ ತಕ್ಕ ಪ್ರತಿಫಲವನ್ನು ಪಡೆದುಕೊಂಡಿದ್ದಾರೆ.
ಹಾಗಾದರೆ ಪ್ರಶಸ್ತಿ ಪಡೆದುಕೊಂಡ ಆಟಗಾರರು ಹಾಗೂ ತಂಡಗಳು ಪಡೆದುಕೊಂಡ ಪ್ರಶಸ್ತಿಯ ಮೊತ್ತವೆಷ್ಟು? ಈ ಬಾರಿ ಪಡೆದ ಪ್ರಶಸ್ತಿಯ ಮೊತ್ತದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ..

ಕಳೆದ ಬಾರಿ ಪ್ರಶಸ್ತಿಯ ಮೊತ್ತ
ಕಳೆದ ಬಾರಿ ಐಪಿಎಲ್ ಅಂತ್ಯದಲ್ಲಿ ಬಿಸಿಸಿಐ 32.5 ಕೋಟಿ ಮೊತ್ತವನ್ನು ಪ್ರಶಸ್ತಿ ಹಣವನ್ನಾಗಿ ವಿಜೇತ ಹಾಗೂ ರನ್ನರ್ ಅಪ್ ತಂಡಕ್ಕೆ ನೀಡಿತ್ತು. ವಿಜೇತ ಮುಂಬೈ ಇಂಡಿಯನ್ಸ್ 20 ಕೋಟಿ ಮೊತ್ತ, ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 12.5 ಕೋಟಿ ಮೊತ್ತವನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಈ ಮೊತ್ತದಲ್ಲಿ ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕಳೆದ ಬಾರಿ ನೀಡಿದ ಮೊತ್ತವನ್ನೇ ಬಿಸಿಸಿಐ ಈ ಬಾರಿಯೂ ಮುಂದುವರಿಸಿದೆ.

ವಿನ್ನರ್-ರನ್ನರ್ ಪ್ರಶಸ್ತಿ ಮೊತ್ತ
ಮುಂಬೈ ಇಂಡಿಯನ್ಸ್ - ವಿನ್ನರ್ಸ್ - 20 ಕೋಟಿ ರೂ
ಡೆಲ್ಲಿ ಕ್ಯಾಪಿಟಲ್ಸ್ - ರನ್ನರ್ಸ್ ಅಪ್- 12.5 ಕೋಟಿ ರೂ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು- 3ನೇ ಹಾಗೂ 4ನೇ ಸ್ಥಾನ ಪಡೆದ ತಂಡಗಳು- ತಲಾ 6.25 ಕೋಟಿ ರೂ.

ವೈಯಕ್ತಿಕ ಪ್ರಶಸ್ತಿಗಳು
ಆರೆಂಜ್ ಕ್ಯಾಪ್ ವಿಜೇತ (ಹೆಚ್ಚಿನ ರನ್) - ಕೆಎಲ್ ರಾಹುಲ್ (ಪಂಜಾಬ್) - 10 ಲಕ್ಷ ರೂ.
ಪರ್ಪಲ್ ಕ್ಯಾಪ್ ವಿಜೇತ (ಹೆಚ್ಚಿನ ವಿಕೆಟ್‌ಗಳು) - ಕಗಿಸೊ ರಬಡಾ (ಡೆಲ್ಲಿ) - 10 ಲಕ್ಷ ರೂ.
ಟೂರ್ನಮೆಂಟ್‌ನ ಉದಯೋನ್ಮುಖ ಆಟಗಾರ - ದೇವದತ್ತ್ ಪಡಿಕ್ಕಲ್ (ಬೆಂಗಳೂತು) - 10 ಲಕ್ಷ
ಆವೃತ್ತಿಯ ಅತ್ಯಮೂಲ್ಯ ಆಟಗಾರ - ಜೋಫ್ರಾ ಆರ್ಚರ್ (ರಾಜಸ್ಥಾನ್) -10 ಲಕ್ಷ ರೂ
ಋತುವಿನ ಸೂಪರ್ ಸ್ಟ್ರೈಕರ್ - ಕಿರಾನ್ ಪೊಲಾರ್ಡ್ (ಮುಂಬೈ) - 10 ಲಕ್ಷ ರೂ.
ಫೈನಲ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ - ಟ್ರೆಂಟ್ ಬೌಲ್ಟ್ (ಮುಂಬೈ) - 5 ಲಕ್ಷ ರೂ.
ಋತುವಿನ ಗೇಮ್ ಚೇಂಜರ್ - ಕೆಎಲ್ ರಾಹುಲ್ (ಪಂಜಾಬ್) - 10 ಲಕ್ಷ ರೂ.
ಋತುವಿನ ಕ್ರ್ಯಾಕ್ ಇಟ್ ಸಿಕ್ಸಸ್ - ಇಶಾನ್ ಕಿಶನ್ (ಮುಂಬೈ) - 10 ಲಕ್ಷ ರೂ

ಐಪಿಎಲ್‌ನಲ್ಲಿ ಖ್ಯಾತಿಯ ಜೊತೆಗೆ ಉತ್ತಮ ಮೊತ್ತ
ಕ್ರಿಕೆಟ್ ಲೋಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಶ್ರೀಮಂತ ಹಾಗೂ ಲಾಭದಾಯಕ ಡೊಮೆಸ್ಟಿಕ್ ಕ್ರಿಕೆಟ್ ಲೀಗ್ ಎನಿಸಿದೆ. ಹೀಗಾಗಿ ಈ ಟೂರ್ನಿಯಲ್ಲಿ ಎಲ್ಲಾ ಕ್ರಿಕೆಟಿಗರೂ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಬಯಸುತ್ತಾರೆ. ಪ್ರದರ್ಶನದ ಮೂಲಕ ಗುರುತಿಸಿಕೊಳ್ಳುವುದರ ಜೊತೆಗೆ ಅತ್ಯುತ್ತಮ ಮೊತ್ತವೂ ಆಟಗಾರರಿಗೆ ಲಭಿಸುವುದು ಇದರ ಕಾರಣಗಳಲ್ಲಿ ಒಂದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications