Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಹೊಸ ಚೆಂಡನ್ನು ಸಿರಾಜ್ ಕೈಗೆ ನೀಡಿದ್ದನ್ನು ನೋಡಿ ಆಶ್ಚರ್ಯವಾಗಿತ್ತು: ಗೌತಮ್ ಗಂಭೀರ್

IPL 2020: Gautam Gambhir surprised Virat Kohlis decision to give the new ball to Mohammed Siraj

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಕೆಕೆಆರ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯ ನಿರ್ಧಾರಕ್ಕೆ ಆಶ್ಚರ್ಯವನ್ನು ವ್ಯಕ್ತಪಡಿಸಿದ ಜೊತೆಗೆ ಪ್ರಶಂಸಿಸಿದ್ದಾರೆ. ಕೊಹ್ಲಿಯ ಈ ನಿರ್ಧಾರದಿಂದಾಗಿ ಸಿರಾಜ್ ತನ್ನ ಮೊದಲನೇ ಓವರ್‌ನಲ್ಲೇ ಎರಡು ವಿಕೆಟ್‌ಗಳ ಸಹಿತ ಮೇಡಿನ್ ಓವರ್‌ಅನ್ನು ಎಸೆದಿದ್ದರು.

ಮೊಹಮದ್ ಸಿರಾಜ್‌ಗೆ ಹೊಸ ಚೆಂಡನ್ನು ನೀಡುವ ಮೂಲಕ ವಿರಾಟ್ ಕೊಹ್ಲಿ ಬುದ್ದಿವಂತಿಕೆಯ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಇದೊಂದು ಸಕಾರಾತ್ಮಕ ನಾಯಕತ್ವವಾಗಿದ್ದು ಈ ಉತ್ತಮ ನಡೆ ನಿಮಗೆ ಅಚ್ಚರಿಯನ್ನು ಉಂಟು ಮಾಡಲಿದೆ" ಎಂದು ಗೌತಮ್ ಗಂಭೀರ್ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಗೌತಮ್ ಗಂಭೀರ್ ಮೂರನೇ ಓವರ್‌ಅನ್ನು ನವ್‌ದೀಪ್ ಸೈನಿಗೆ ನೀಡಿದ ಬಗ್ಗೆಯೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. 'ಮೊದಲ ಓವರ್‌ಅನ್ನು ಕ್ರಿಸ್ ಮೋರಿಸ್‌ಗೆ ನೀಡಿದ ಬಳಿಕ ಮೂರನೇ ಓವರ್‌ಅನ್ನು ನವ್‌ದೀಪ್ ಸೈನಿಗೆ ನೀಡಿದ ಬಗ್ಗೆ ನನಗೆ ಸ್ಪಷ್ಟಕಾರಣಗಳು ತಿಳಿಯುತ್ತಿಲ್ಲ ಆದರೆ ಇದು ಕೂಡ ನಾಯಕನ ಸೂಕ್ತವಾದ ನಡೆ' ಎಂದು ಗಂಭೀರ್ ತಿಳಿಸಿದ್ದಾರೆ.

ಇನ್ನು ಸಿರಾಜ್‌ಗೆ ಹೊರ ಚೆಂಡನ್ನು ನೀಡಿದ ಬಗ್ಗೆ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯೆಯನ್ನು ಪಂದ್ಯ ಮುಗಿದ ಬಳಿಕ ಹೇಳಿದ್ದರು. "ಇದೊಂದು ತುಂಬಾ ತಡವಾಗಿ ತೆಗೆದುಕೊಂಡ ನಿರ್ಧಾರವಾಗಿತ್ತು. ವಾ.ಸುಂದರ್‌ಗೆ ಚೆಂಡು ಈಡಲು ನಿರ್ಧರಿಸಿದ್ದೆವು. ಆದರೆ ಪಿಚ್‌ನ ಮೇಲ್ಭಾಗವನ್ನು ಗಮನಿಸಿದಾಗ ಹಾಗೂ ಅದರ ಶುಷ್ಕತೆಯನ್ನು ಕಂಡು ಸಿರಾಜ್‌ಗೆ ನೀಡುವ ನಿರ್ಧಾರ ಮಾಡಿದ್ದೆ" ಎಂದು ಕೊಹ್ಲಿ ತಿಳಿಸಿದ್ದಾರೆ.

"ವಾಶಿಂಗ್ಟನ್ ಸುಂದರ್ ಮೂಲಕ ಬೌಲಿಂಗ್ ದಾಳಿಯನ್ನು ಆರಮಭಿಸಿ ಎರಡನೇ ಓವರ್‌ ಕ್ರಿಸ್ ಮೋರಿಸ್‌ಗೆ ನೀಡಲು ತೀರ್ಮಾನಿಸಿದ್ದೆವು. ಆದರೆ ಬಳಿಕ ಕ್ರಿಸ್ ಮೋರಿಸ್ ಜೊತೆಗೆ ಸಿರಾಜ್ ಕೈಗೆ ಹೊಸ ಬಾಲ್ ನೀಡಲು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವಿರಾಟ್ ಕೊಹ್ಲಿ ತಮ್ಮ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದರು.

Story first published: Thursday, October 22, 2020, 17:57 [IST]
Other articles published on Oct 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+