ಐಪಿಎಲ್ 2020: ಮ್ಯಾಕ್ಸ್‌ವೆಲ್ ಶ್ರೇಷ್ಠ ಟೀಮ್ ಮ್ಯಾನ್ ಎಂದು ಪಟ್ಟ ಕೊಟ್ಟ ಕೆಎಲ್ ರಾಹುಲ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಬಳಿಕ ಮಾತನಾಡಿದ ಕಿಂಗ್ಸ್‌ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್ ಮ್ಯಾಕ್ಸ್‌ವೆಲ್ ಅವರನ್ನು ಶ್ರೇಷ್ಠ ಟೀಮ್ ಮ್ಯಾನ್ ಎಂದು ಹೊಗಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಅವಾಲಿನ ಗುರಿಯನ್ನು ಬೆನ್ನಟ್ಟುವ ವೇಳೆ ಮೂರು ವಿಕೆಟ್ ಕಳೆದುಕೊಮಡಿದ್ದ ಸಂದರ್ಭದಲ್ಲಿ ಸಂಭವಿಸಬಹುದಾಗಿದ್ದ ಕುಸಿತವನ್ನು ತಡೆದು ಅದ್ಭುತ ಜೊತೆಯಾಟವನ್ನು ನೀಡಿದ್ದು ನಿಕೋಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್. ಪೂರನ್ 53 ರನ್ ಗಳಿಸಿದ್ದರೆ ಮ್ಯಾಕ್ಸ್‌ವೆಲ್ 32 ರನ್ ಗಳಿಸಿ ಗೆಲುವನ್ನು ಸುಲಭವಾಗಿಸಿದರು.
ಪಂದ್ಯದ ಮುಕ್ತಾಯದ ಬಳಿಕ ಕೆಎಲ್ ರಾಹುಲ್ ಮಾತನಾಡುತ್ತಾ "ಮ್ಯಾಕ್ಸ್‌ವೆಲ್ ನೆಟ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆತನೋರ್ವ ಶ್ರೇಷ್ಠ ಟೀಮ್ ಮ್ಯಾನ್. ಆತ ತಂಡದಲ್ಲಿ ಸಂಯೋಜನೆಯನ್ನು ತರುವಲ್ಲಿ ಸಹಕಾರಿಯಾಗುತ್ತಾರೆ" ಎಂದು ಸ್ಟಾರ್ ಸ್ಪೋರ್ಟ್ಸ್‌ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.
"ಕಳೆದ ಎರಡು ಪಂದ್ಯಗಳಲ್ಲಿ ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ತಂಡಗಳನ್ನು ಮಣಿಸಿದ್ದೇವೆ. ಅದರಲ್ಲೂ ಕಳೆದ ಪಂದ್ಯದ ಬಳಿಕ ನಿದ್ದೆ ಮಾಡಲೂ ನನಗೆ ಸಾಧ್ಯವಾಗಿರಲಿಲ್ಲ. ಸೂಪರ್ ಓವರ್‌ಗಿಂತ ಮುನ್ನವೇ ಗೆಲ್ಲಬಹುದಾಗಿದ್ದ ಪಂದ್ಯವಾಗಿತ್ತು. ಆದರೆ ಪಂದ್ಯ ನಮ್ಮನ್ನು ವಿನಮ್ರವಾಗಿರುವಂತೆ ಮಾಡಿತು" ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications