ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಿದ್ದು ಸಂತಸ ನೀಡಿದೆ: ನರೈನ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಗೆಲುವಿನಲ್ಲಿ ಕೆಕೆಆರ್ ತಂಡದ ಆಲ್‌ರೌಂಡರ್ ಸುನಿಲ್ ನರೈನ್ ಅವರ ಸ್ಪೋಟಕ ಬ್ಯಾಟಿಂಗ್ ಕೂಡ ಮಹತ್ವದ ಪಾತ್ರವನ್ನು ವಹಿಸಿತ್ತು. ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದ ನರೈನ್ ಅದ್ಭುತ ಪ್ರದರ್ಶನದ ಮೂಲಕ ಪುನರಾಗಮನವನ್ನು ಮಾಡಿರುವುದಕ್ಕೆ ಸಂತಸವವನ್ನು ವ್ಯಕ್ತಪಡಿಸಿದ್ದಾರೆ.
42 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್ ಇನ್ನಿಂಗ್ಸ್ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ನಿತೀಶ್ ರಾಣಾಗೆ ಸುನೈಲ್ ನರೈನ್ ಸಾಥ್ ನೀಡಿದರು. ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡಿದ್ದು ಮಾತ್ರವಲ್ಲ ಸ್ಪೋಟಕ ಬ್ಯಾಟಿಂಗ್ ಮೂಲಕ ಕೆಕೆಆರ್ ಬೃಹತ್ ಮೊತ್ತವನ್ನು ಪೇರಿಸಲುವಲ್ಲಿ ನರೈನ್ ಪಾತ್ರವೂ ಮಹತ್ವದ್ದಾಗಿತ್ತು.
"ಇದು ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಆಗಿತ್ತು. ಅದರಲ್ಲೂ ವೇಗಿಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿತ್ತು. ಹಾಗಾಗಿ ನಾವು ಅಗಲವಾದ ಯಾರ್ಕರ್‌ಗಳತ್ತ ಗಮನ ನೀಡಬೇಕಿತ್ತು" ಎಂದು ವೆಸ್ಟ್ ಇಮಡೀಸ್‌ನ ಆಲ್‌ರೌಂಡರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೆಲ ಪಂದ್ಯಗಳನ್ನು ಕಳೆದು ಕೋಮಡ ಬಳಿಕ ಮತ್ತೆ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು ಸಂತಸ ನೀಡಿದೆ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನಿಡಲು ಸಾಧ್ಯವಾಗಿದ್ದಕ್ಕೆ ಹರ್ಷಗೊಂಡಿದ್ದೇನೆ ಎಮದು ಸುನಿಲ್ ನರೈನ್ ಪ್ರತಿಕ್ರಿಯಿಸಿದ್ದಾರೆ. ಸುನಿಲ್ ನರೈನ್ ಬೌಲಿಂಗ್ ಶೈಲಿಯಬಗ್ಗೆ ಅನುಮಾನ ವ್ಯಕ್ತವಾಗಿದ್ದ ಕಾರಣ ಅದನ್ನು ಸರಿಪಡಿಸಿಕೊಮಡು ನರೈನ್ ಮತ್ತೆ ಕಣಕ್ಕಿಳಿದಿದ್ದಾರೆ.
"ನಾವು 160 ರನ್‌ಗಳನ್ನು ಗಳಿಸುವತ್ತ ಚಿತ್ತ ನೆಟ್ಟಿದ್ದೆವು, ಆದರೆ ಅಂತಿಮವಾಗಿ 194 ರನ್ ಗಳಿಸಲು ಸಾಧ್ಯವಾಯಿತು. ಇದು ಉತ್ತಮ ಮೊತ್ತವಾಗಿದೆ ಎಂದು ನರೈನ್ ಹೇಳಿದ್ದಾರೆ. 32 ಎಸೆತಗಳನ್ನು ಎದುರಿಸಿದ ನರೈನ್ 62 ರನ್ ಗಳಿಸಿ ಮಿಂಚಿದರು. ಡೆಲ್ಲಿ ವಿರುದ್ದದ ಪಂದ್ಯವನ್ನು ಕೆಕೆಆರ್ 59 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications