Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪತ್ನಿ-ಪುತ್ರ ಚಿಯರ್ ಮಾಡುತ್ತಿರೋ ಫೋಟೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

IPL 2020: Hardik Pandya Shares Photo of Wife Natasa Stankovic And Son Agastya Cheering For Him

ದುಬೈ: ಇತ್ತೀಚೆಗಷ್ಟೇ ಅಪ್ಪನಾದ ಖುಷಿ ಹಂಚಿಕೊಂಡಿದ್ದ ಭಾರತದ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ತನ್ನ ಪತ್ನಿ ಮತ್ತು ಪುತ್ರನ ಚಂದದ ಫೋಟೋ ಶೇರ್ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯದ ವೇಳೆ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಮತ್ತು ಪುತ್ರ ಅಗಸ್ತ್ಯ ತನಗೆ ಚಿಯರ್ ಮಾಡುತ್ತಿರುವ ಫೋಟೋವನ್ನು ಹಾರ್ದಿಕ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.

ಹಾರ್ದಿಕ್ ಹಾಕಿಕೊಂಡಿರುವ ಈ ಫೋಟೋ ತೆಗೆದಿದ್ದು ಐಪಿಎಲ್ 5ನೇ ಪಂದ್ಯದ ವೇಳೆ. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಈ ಪಂದ್ಯದಲ್ಲಿ ಕಾದಾಡಿದ್ದವು. ರೋಹಿತ್ ಶರ್ಮಾ ಅರ್ಧ ಶತಕದ ನೆರವಿನೊಂದಿಗೆ ಪಂದ್ಯದಲ್ಲಿ ಎಂಐ ಟೂರ್ನಿಯ ಮೊದಲ ಜಯ ಕಂಡಿತ್ತು.

ಹಾರ್ದಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿರುವ ಚಿತ್ರದಲ್ಲಿ ಪತ್ನಿ ನತಾಶ ಮತ್ತು ಪುಟಾಣಿ ಪುತ್ರ ಅಗಸ್ತ್ಯ ಇಬ್ಬರೂ ಮುಂಬೈ ಇಂಡಿಯನ್ಸ್ ತಂಡದ ಟಿ ಶರ್ಟ್ ಧರಿಸಿದ್ದಾರೆ. ಇಬ್ಬರೂ ಟಿವಿ ನೋಡುತ್ತ ಮುಂಬೈ ತಂಡಕ್ಕೆ, ಹಾರ್ದಿಕ್ ಪಾಂಡ್ಯನಿಗೆ ಚಿಯರ್ ಮಾಡುತ್ತಿರುವ ದೃಶ್ಯವಿದೆ.

IPL 2020: Hardik Pandya Shares Photo of Wife Natasa Stankovic And Son Agastya Cheering For Him

ಅಂದ್ಹಾಗೆ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ 49 ರನ್ ಜಯ ಗಳಿಸಿದೆ. ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯ ಸೆಪ್ಟೆಂಬರ್ 28ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯಲಿದೆ.

Story first published: Tuesday, October 6, 2020, 15:42 [IST]
Other articles published on Oct 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+