ಹರ್ಷ ಭೋಗ್ಲೆ ಆಯ್ಕೆಯ ಐಪಿಎಲ್ 2020 ತಂಡದಲ್ಲಿ ರಬಾಡಾ ಇಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನು ಆಯ್ಕೆ ಮಾಡಿ ಮಾಜಿ ಕ್ರಿಕೆಟರ್ಸ್, ಕಾಮೆಂಟೆಟರ್ಸ್ ಐಪಿಎಲ್ 2020ರ ಶ್ರೇಷ್ಠ ತಂಡವನ್ನು ಪ್ರಕಟಿಸುತ್ತಿದ್ದಾರೆ. ಜನಪ್ರಿಯ ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ತಮ್ಮ ಆಯ್ಕೆಯ ತಂಡವನ್ನು ತಡವಾಗಿ ತಿಳಿಸಿದ್ದಾರೆ.
ಕೊವಿಡ್ 19 ಸಂಕಷ್ಟದ ನಡುವೆ ಯುಎಇಯಲ್ಲಿ ಐಪಿಎಲ್ 13ನೇ ಆವೃತ್ತಿಯನ್ನು ಆಯೋಜಿಸಿ ಬಿಸಿಸಿಐ ಗೆದ್ದಿದೆ. ಅಂತಿಮ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಮುಂಬೈ ಇಂಡಿಯನ್ಸ್ ಮತ್ತೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಈ ನಡುವೆ ಐದನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ನಾಯಕ ರೋಹಿತ್ ಶರ್ಮ, ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಹಾಗೂ ಪರ್ಪಲ್ ಕ್ಯಾಪ್ ವಿಜೇತ ಕಾಗಿಸೋ ರಬಾಡಾ ಅವರನ್ನು ಹರ್ಷ ಭೋಗ್ಲೆ ಅವರು ತಮ್ಮ ತಂಡಕ್ಕೆ ಆಯ್ಕೆ ಮಾಡಿಲ್ಲ.
ಕಿಂಗ್ಸ್ ಎಲೆವನ್ ಪಂಜಾಬ್ ತಂಡ ನಾಯಕ ಕೆಎಲ್ ರಾಹುಲ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಓಪನರ್ಸ್ ಆಗಿ ಹುಸೇನ್ ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮುಂಬೈನ ಸೂರ್ಯಕುಮಾರ್ ಯಾದವ್ ಆರಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿದ್ದಾರೆ. ಒಟ್ಟಾರೆ ಮುಂಬೈ ಇಂಡಿಯನ್ಸ್ ತಂಡದಿಂದ ಐದು ಮಂದಿಯನ್ನು ಆಯ್ಕೆ ಮಾಡಿದ್ದಾರೆ.
ಹರ್ಷ ಭೋಗ್ಲೆಆಯ್ಕೆಯ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಸೂರ್ಯ ಕುಮಾರ್ ಯಾದವ್, ಎಬಿ ಡಿವಿಲಿಯರ್ಸ್(ವಿಕೆಟ್ ಕೀಪರ್), ಕಿರಾನ್ ಪೊಲ್ಲಾರ್ಡ್,ಹಾರ್ದಿಕ್ ಪಾಂಡ್ಯ, ಜೋಫ್ರಾ ಆರ್ಚರ್, ರಶೀದ್ ಖಾನ್, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications