ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್‌ನನ್ನು 'ಬೇಬಿ ಸೆಹ್ವಾಗ್' ಎಂದ ಗ್ರೇಮ್ ಸ್ವಾನ್

ಈ ಬಾರಿಯ ಐಪಿಎಲ್‌ನಲ್ಲಿ ಯುವ ಆಟಗಾರರು ಭಾರೀ ಪ್ರಮಾಣದಲ್ಲಿ ಮಿಂಚುತ್ತಿದ್ದಾರೆ. ಪ್ರತಿ ತಂಡದಲ್ಲೂ ಯುವ ಕ್ರಿಕೆಟಿಗರು ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದ್ದಾರೆ. ಯುವ ಆಟಗಾರರೇ ಹೆಚ್ಚಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓರ್ವ ಆಟಗಾರನನ್ನು ಗ್ರೇಮ್ ಸ್ವಾನ್ ಬೇಬಿ ಸೆಹ್ವಾಗ್ ಎಂದು ಕರೆದಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಹೀಗೆ ಬೇಬಿ ಸೆಹ್ವಾಗ್ ಎಂದು ಉಲ್ಲೇಖಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಂಭಿಕ ಆಟಗಾರ ಪೃಥ್ವಿ ಶಾ ಬಗ್ಗೆ. ಅರಂಭಿಕನಾಗಿ ಶಾ ತೋರುತ್ತಿರುವ ಪ್ರದರ್ಶನ ಅದ್ಭುತವಾಗಿದೆ. ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೂರನೇ ಅತಿ ಹೆಚ್ಚು ಸ್ಕೋರ್ ಮಾಡಿದ ಆಟಗಾರನಾಗಿದ್ದಾರೆ ಪೃಥ್ವಿ ಶಾ.
ಕ್ರಿಕೆಟ್ ಕನೆಕ್ಟೆಡ್ ಶೋದಲ್ಲಿ ಮಾತನಾಡಿದ ಗ್ರೇಮ್ ಸ್ವಾನ್ ಶಾ ಪ್ರದರ್ಶನದ ಬಗ್ಗೆ ಸಾಕಷ್ಟು ಉತ್ತಮ ಮಾತುಗಳನ್ನಾಡಿದ್ದಾರೆ. ಪೃಥ್ವಿ ಶಾ ಬ್ಯಾಟಿಂಗ್ ಮಾಡುವ ರೀತಿಯನ್ನು ನಾನು ಇಷ್ಟಪಡುತ್ತೇನೆ. ಆತನೊಂದತರಾ ಬೇಬಿ ಸೆಹ್ವಾಗ್ ರೀತಿ. ಭಾರತೀಯ ಕ್ರಿಕೆಟಿಗರಲ್ಲಿ ನಾನು ಇಷ್ಟಪಡುವ ಸೆಹ್ವಾಗ್ ಅವರ ಕಿರಿ ಆವೃತ್ತಿಯಂತೆ ಭಾಸವಾಗುತ್ತದೆ ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸ್ವಾನ್ ಶ್ರೇಯಸ್ ಅಯ್ಯರ್ ನಾಯಕತ್ವ ಹಾಗೂ ರಿಕಿ ಪಾಂಟಿಂಗ್ ಕೋಚಿಂಗ್ ಬಗ್ಗೆಯೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ತಂಡವಾಗಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ ತಂಡದಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ಕೂಡ ನಾವು ಕಾಣಬಹುದಾಗಿದ ಎಂದು ಸ್ವಾನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications