For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್ ವಿಚಾರದಲ್ಲಿ ಆತ ಶ್ರೇಷ್ಠರಲ್ಲಿ ಶ್ರೇಷ್ಠ: ಕೊಹ್ಲಿ ಬೆಂಬಲಕ್ಕೆ ನಿಂತ ಪೀಟರ್‌ಸನ್

Ipl 2020: ‘He’s The Best Of The Best When It Comes To Batting’ -Kevin Pietersen

ಈ ಬಾರಿಯ ಐಪಿಎಲ್ ಯುಎಇನಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಕೆಲ ಆಟಗಾರರು ಅಮೋಘ ಆಟದ ಮೂಲಕ ಟೂರ್ನಿಯ ರಂಗು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 2 ಪಂದ್ಯಗಳಲ್ಲೂ ನೀರಸ ಪ್ರದರ್ಶನವನ್ನು ನೀಡಿದ್ದಾರೆ. ಮೊದಲ ಪಂದ್ಯದಲ್ಲಿ 14 ರನ್ ಹಾಗೂ ಎರಡನೇ ಪಂದ್ಯದಲ್ಲಿ 1 ರನ್ ಗಳಿಸಿ ಔಟಾಗಿದ್ದರು.

ಈ ಪ್ರದರ್ಶನದ ಕಾರಣದಿಂದಾಗಿ ಕೊಹ್ಲಿ ಸಾಕಷ್ಟು ಟೀಕೆಗೂ ಗುರಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಆದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ವಿರಾಟ್ ಕೊಹ್ಲಿಗೆ ಬೆಂಬಲವನ್ನು ನೀಡಿ ಮಾತನಾಡಿದ್ದಾರೆ. ಬ್ಯಾಟಿಂಗ್ ವಿಚಾರದಲ್ಲಿ ಕೊಹ್ಲಿ ಸರ್ವಶ್ರೇಷ್ಠ ಆಟಗಾರ ಎಂದಿದ್ದಾರೆ.

ಆರ್‌ಸಿಬಿ ಮೊದಲ ಪಂದ್ಯವನ್ನು ಗೆಲುವಿನ ಮೂಲಕ ಅಭಿಯಾನ ಆರಂಭಿಸಿದರೂ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್‌ಗೆ 97 ರನ್‌ಗಳ ಅಂತರದ ಬೃಹತ್ ಸೋಲಿನ ಮೂಲಕ ಮುಖಭಂಗ ಅನುಭವಿಸಿತ್ತು. ಈ ಪಂದ್ಯದಲ್ಲಿ ನಾಯಕನಾಗಿ ವಿರಾಟ್ ತೆಗೆದುಕೊಡ ಕೆಲ ನಿರ್ಧಾರಗಳು ಹಾಗೂ ಎಡವಟ್ಟುಗಳು ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

ಈ ಬಗ್ಗೆ ಮಾತಾಡಿದ ಪೀಟರ್‌ಸನ್ "ಕೊಹ್ಲಿಯ ಆರಂಭ ಉತ್ತಮವಾಗಿರಲಿಲ್ಲ. ಸ್ವತಃ ಕೊಹ್ಲಿಯೇ ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಒಪ್ಪಿಕೊಂಡು ತನ್ನ ಜವಾಬ್ಧಾರಿ ಹಾಗೂ ನಿರ್ಧಾರಗಳ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಯಾವ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬುದನ್ನು ನೋಡಲು ಬಯಸುತ್ತಿದ್ದೇನೆ ಎಂದು ಪೀಟರ್‌ಸನ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿವಾರದಲ್ಲಿ ಸರ್ವಶ್ರೇಷ್ಠ ಆಟಗಾರ. ಆತನೋರ್ವ ಶೋಮ್ಯಾನ್. ಆದರೆ ಈಗ ಪ್ರೇಕ್ಷಕರು ಇಲ್ಲ. ಶೋಮ್ಯಾನ್‌ಗೆ ಪ್ರೇಕ್ಷಕರ ಅಗತ್ಯವಿದೆ. ಈ ಕ್ಷಣದಲ್ಲಿ ತನ್ನ ಪ್ರದರ್ಶನ ಉತ್ತಮವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ಪ್ರೇಕ್ಷಕರ ಅಲಭ್ಯತೆಯಲ್ಲಿ ಕೊಹ್ಲಿ ಪ್ರದರ್ಸನ ನೋಡಲು ಉತ್ಸುಕನಾಗಿದ್ದೇನೆ ಎಂದು ಪೀಟರ್‌ಸನ್ ಹೇಳಿದ್ದಾರೆ.

Story first published: Monday, September 28, 2020, 16:24 [IST]
Other articles published on Sep 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+