Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್ vs ಕಿಂಗ್ಸ್ XI ಪಂಜಾಬ್ ಪಂದ್ಯದ ತಮಾಷೆಯ ಮೀಮ್ಸ್

IPL 2020: Hilarious memes from Mumbai Indians vs Kings XI Punjab match

ಬೆಂಗಳೂರು: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ 48 ರನ್‌ಗಳ ಜಯ ಗಳಿಸಿದೆ. ಬ್ಯಾಟಿಂಗ್ ವಿಭಾಗದ ವೈಫಲ್ಯ, ಡೆತ್ ಓವರ್‌ನಲ್ಲಿ ಉತ್ತಮ ಬೌಲರ್ ಇಳಿಸುವಲ್ಲಿ ಎಡವಿದ ಪಂಜಾಬ್‌ ಸೋಲಿನ ಬೆಲೆ ತೆತ್ತಿದೆ.

ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಉತ್ತಮ ಪ್ರದರ್ಶನ ಎಂಐಗೆ ಗೆಲುವಿನ ಉಡುಗೊರೆ ನೀಡಿದೆ. ಪಂದ್ಯ ಮುಗಿಯುತ್ತಲೇ ಹಣಾಹಣಿಗೆ ಸಂಬಂಧಿಸಿ ತಮಾಷೆಯ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಕ್ಕಿವೆ.

ಪಂದ್ಯದ ಅಂಕಿ-ಅಂಶಗಳನ್ನು, ಸಾರಾಂಶವನ್ನು ಕಣ್ಣಾಯಿಸುತ್ತ ಜೊತೆಗೆ ತಮಾಷೆಯ ಮೀಮ್ಸ್ ನೋಡಿಕೊಂಡು ಬರೋಣ ಬನ್ನಿ..

ರೋಹಿತ್ ಅರ್ಧ ಶತಕ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡ, ರೋಹಿತ್ ಶರ್ಮಾ 70 (45 ಎಸೆತ), ಸೂರ್ಯಕುಮಾರ್ ಯಾದವ್ 10, ಇಶಾನ್ ಕಿಶನ್ 28, ಕೀರನ್ ಪೊಲಾರ್ಡ್ 47 (20 ಎಸೆತ), ಹಾರ್ದಿಕ್ ಪಾಂಡ್ಯ 30 (11 ಎಸೆತ) ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 191 ರನ್ ಗಳಿಸಿತು.

ಎಡವಿದ ರಾಹುಲ್

ಮುಂಬೈ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ನಲ್ಲಿ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಅವರಂಥಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಇದ್ದಾಗ ಡೆತ್ ಓವರ್‌ಗೆ ಬೌಲರ್ ಆರಿಸುವಲ್ಲಿ ನಾಯಕ ಕೆಎಲ್ ರಾಹುಲ್ ಎಡವಿದರು. ತಂಡದಲ್ಲಿ ವೇಗಿಗಳಿದ್ದರೂ ಕೂಡ ರಾಹುಲ್ ಅಂತಿಮ ಓವರ್ ಅನ್ನು ಸ್ಪಿನ್ನರ್‌ಗೆ ನೀಡಿದರು. ಪರಿಣಾಮ, 20ನೇ ಓವರ್‌ ಎಸೆದ ಕೃಷ್ಣಪ್ಪ ಗೌತಮ್‌ ಕೊನೇಯ ಒಂದೇ ಓವರ್‌ನಲ್ಲಿ 25 ರನ್ ನೀಡಿದರು.

ತಲೆ ಬಾಗಿದ ಪಂಜಾಬ್

ಎಂಐ ನೀಡಿದ್ದ 192 ರನ್ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದ ಕೆಎಲ್ ರಾಹುಲ್ 17, ಮಯಾಂಕ್ ಅಗರ್ವಾಲ್ 25, ನಿಕೋಲಸ್ ಪೂರನ್ 44 (27 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ 11, ಕೃಷ್ಣಪ್ಪ ಗೌತಮ್ 22 ರನ್ ಬಾರಿಸಿದರು. ಕೆXIಪಿ 20 ಓವರ್ ಮುಕ್ತಾಯಕ್ಕೆ 8 ವಿಕೆಟ್ ನಷ್ಟದಲ್ಲಿ 143 ರನ್ ಬಾರಿಸಿ ತಲೆ ಬಾಗಿತು.

ಎಂಐನಿಂದ ಚತುರ ಬೌಲಿಂಗ್

ಮುಂಬೈ ಇನ್ನಿಂಗ್ಸ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಶೆಲ್ಡನ್ ಕಾಟ್ರೆಲ್, ಮೊಹಮ್ಮದ್ ಶಮಿ ಮತ್ತು ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದರೆ, ಪಂಜಾಬ್ ಇನ್ನಿಂಗ್ಸ್‌ನಲ್ಲಿ ಎಂಐಯ ಟ್ರೆಂಟ್ ಬೌಲ್ಟ್ 1, ಜೇಮ್ಸ್ ಪ್ಯಾಟಿನ್ಸನ್ 2, ಕೃನಾಲ್ ಪಾಂಡ್ಯ 1, ಜಸ್‌ಪ್ರೀತ್ ಬೂಮ್ರಾ 2, ರಾಹುಲ್ ಚಾಹರ್ 2 ವಿಕೆಟ್‌ನಿಂದ ಗಮನ ಸೆಳೆದರು.

ರೋಹಿತ್ ಶರ್ಮಾ ದಾಖಲೆ

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 38ನೇ ಅರ್ಧ ಶತಕ ಬಾರಿಸಿ ಐಪಿಎಲ್‌ನಲ್ಲಿ ಅತ್ಯಧಿಕ ಅರ್ಧ ಶತಕ ಬಾರಿಸಿದ ದಾಖಲೆ ಪಟ್ಟಿಯಲ್ಲಿ ಸುರೇಶ್ ರೈನಾ ಜೊತೆಗೆ ಎರಡನೇ ಸ್ಥಾನ ಹಂಚಿಕೊಂಡರು. ಅಲ್ಲದೆ 5000+ ರನ್ ದಾಖಲೆಯೂ ಪೂರೈಸಿಕೊಂಡರು.

Story first published: Friday, October 2, 2020, 8:42 [IST]
Other articles published on Oct 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+