ಗೂಗಲ್‌ನಲ್ಲಿ ಐಪಿಎಲ್ ಹುಡುಕಿದರೆ ಬಣ್ಣ ಬಣ್ಣದ ಪಟಾಕಿ ಸಿಡಿಯುತ್ತೆ!

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮಂಗಳವಾರ ತೆರೆ ಬಿದ್ದಿದೆ. ಭಾರತದಲ್ಲಿ ಕೊರೊನಾವೈರಸ್ ಭೀತಿಯಿದ್ದ ಕಾರಣ ಅದ್ದೂರಿ ಕ್ರಿಕೆಟ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲಾಗಿತ್ತು. ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ.
ಗೂಗಲ್‌ನಲ್ಲಿ ನೀವೀಗ ಐಪಿಎಲ್ ಬಗ್ಗೆ ಏನೇ ಹುಡುಕಾಟ ನಡೆಸಿದರೂ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಬಣ್ಣ ಬಣ್ಣದ ಪಟಾಕಿ ಸಿಡಿಯುತ್ತದೆ. ಇಂಡಿಯನ್ಸ್ ಪ್ರೀಮಿಯರ್ ಲೀಗ್‌ಗೆ ಗೂಗಲ್ ಹೀಗೆ ವಿಶಿಷ್ಠ ರೀತಿಯಲ್ಲಿ ಬೆಂಬಲ ಸೂಚಿಸಿದೆ, ಸ್ಪಂದಿಸಿದೆ.
2020ರ ಐಪಿಎಲ್ ಮುಕ್ತಾಯಗೊಂಡ ಮರುದಿನ ಅಂದರೆ ನವೆಂಬರ್ 11ರ ಬುಧವಾರದಂದು ಗೂಗಲ್‌ನಲ್ಲಿ ಐಪಿಎಲ್ ಅಥವಾ ಮುಂಬೈ ಇಂಡಿಯನ್ಸ್ ಅಂತ ನೀವು ಸರ್ಚ್ ಕೊಟ್ಟರೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯಲ್ಲಿ ಬಣ್ಣದ ಸಿಡಿಮದ್ದುಗಳು ಸಿಡಿಯುತ್ತಿರುವ ಗ್ರಾಫಿಕ್ಸ್ ಬರುತ್ತದೆ.
ಮಂಗಳವಾರ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 156 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.4ನೇ ಓವರ್‌ಗೆ 5 ವಿಕೆಟ್ ಕಳೆದು 157 ರನ್ ಗಳಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications