ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಚೆನ್ನೈನ ಸ್ಟಾರ್ ಆಟಗಾರ ಅಲಭ್ಯ?

ದುಬೈನಲ್ಲಿ ಜಯದ ಲಯಕ್ಕೆ ಮರಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಚಿಂತೆ ಪಡುವ ಸುದ್ದಿಯೊಂದು ಬಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮುಂದಿನ ಪಂದ್ಯಕ್ಕೆ ತಂಡದ ಸ್ಟಾರ್ ಆಟಗಾರರೊಬ್ಬರು ಅಲಭ್ಯರಾಗುವ ಸಾಧ್ಯತೆ ಕಂಡು ಬಂದಿದೆ. ಚೆನ್ನೈನ ಬಹು ನಂಬುಗೆಯ ಆರಂಭಿಕ ಆಟಗಾರ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ಗಾಯಗೊಂಡಿರುವ ಸುಳಿವು ಸಿಕ್ಕಿದೆ.
ಆದರೆ, ಈ ಬಗ್ಗೆ ಚೆನ್ನೈ ತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಭಾನುವಾರ ರಾತ್ರಿ ದುಬೈನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ 10 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆರಂಭಿಕರಾದ ಶೇನ್ ವ್ಯಾಟ್ಸನ್ (53 ಎಸೆತಗಳಲ್ಲಿ 83 ನಾಟೌಟ್, 11 ಬೌಂಡರಿ, 3 ಸಿಕ್ಸರ್) ಮತ್ತು ಫಾಫ್ ಡುಪ್ಲೆಸಿಸ್ (53 ಎಸೆತಗಳಲ್ಲಿ 87 ನಾಟೌಟ್ 11 ಬೌಂಡರಿ, ಒಂದು ಸಿಕ್ಸರ್) ಬಾರಿಸಿ 181 ರನ್ ಗಳಿಸಿದರು. ಸತತ ಮೂರು ಸೋಲಿನ ಬಳಿಕ ಧೋನಿ ಬಳಗ ಗೆಲುವಿನ ನಗೆ ಬೀರಿತ್ತು. ಈ ಗೆಲುವಿನ ತಮ್ಮದೇ ಆದ ಕೊಡುಗೆ ನೀಡಿದ ಫಾಫ್ ಡುಪ್ಲೆಸಿಸ್ ಅವರು ಪಂದ್ಯದ ನಂತರ ಶೇನ್ ವಾಟ್ಸನ್ ಜೊತೆ ಮೈದಾನದಲ್ಲಿ ನಡೆದುಕೊಂಡು ಹೋಗುವಾಗ ಅವರ ಮೊಣಕಾಲಿಗೆ ಐಸ್ ಪ್ಯಾಕ್ ಸುತ್ತಿಕೊಂಡಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಹೀಗಾಗಿ, ಡುಪ್ಲೆಸಿಸ್ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಐಪಿಎಲ್ 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸತತವಾಗಿ ಉತ್ತಮ ಆಟವನ್ನು ಫಾಫ್ ಡುಪ್ಲೆಸಿಸ್ ನೀಡಿದ್ದಾರೆ. ಐಪಿಎಲ್ 2020ರಲ್ಲಿ 58, 72, 43, 22, 87 ರನ್ ಗಳಿಸಿದ್ದು ಎರಡು ಬಾರಿ ಅಜೇಯರಾಗಿ ಉಳಿದಿದ್ದಾರೆ. ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಈಗ ಕೆಎಲ್ ರಾಹುಲ್ (302) ನಂತರದ ಸ್ಥಾನದಲ್ಲಿದ್ದಾರೆ. ಚೆನ್ನೈ ಬ್ಯಾಟಿಂಗ್ ಬಲವಾಗಿರ ಡು ಪ್ಲೆಸಿಸ್ ಗಾಯಗೊಂಡಿದ್ದರೆ ಧೋನಿ ಪಡೆಗೆ ಭಾರಿ ಹಿನ್ನಡೆಯಾಗಲಿದೆ. ಅತ್ಯುತ್ತಮ ಫೀಲ್ಡರ್, ಕ್ಯಾಚರ್ ಆಗಿರುವ ಡು ಪ್ಲೆಸಿಸ್ ತಂಡದ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಾರೆ.
ಆದರೆ, ಸದ್ಯಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಫಾಫ್ ಡುಪ್ಲೆಸಿಸ್ ಹೆಚ್ಚು ತೊಂದರೆಯಲ್ಲಿದ್ದಂತೆ ಕಂಡು ಬಂದಿಲ್ಲ. ಸ್ನಾಯು ಸೆಳೆತಕ್ಕೆ ಒಳಗಾಗಿರಬಹುದು. ಸಣ್ಣ ಮಟ್ಟದ ನೋವಿನಿಂದ ಬಳಲುತ್ತಿರಬಹುದು ಎಂದು ತಿಳಿದು ಬಂದಿದೆ. ಬುಧವಾರದಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications