For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬೃಹತ್ ಸಿಕ್ಸರ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಇಶಾನ್ ಕಿಶನ್

IPL 2020 : Ishan Kishan credits his mother after match-winning performence

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಡೆಲ್ಲಿ ನೀಡಿದ 111 ರನ್‌ಗಳ ಸುಲಭ ಸವಾಲನ್ನು ಮುಂಬೈ ಇಂಡಿಯನ್ಸ್ ಕೇವಲ 1 ವಿಕೆಟ್ ಕಳೆದುಕೊಂಡು ತಲುಪಿತ್ತು. ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ಇಶಾನ್ ಕಿಶನ್ 47 ಎಸೆತಗಳಲ್ಲಿ 72 ರನ್ ಬಾರಿಸಿ ಮಿಂಚಿದ್ದಾರೆ.

ಈ ಅದ್ಭುತ ಪ್ರದರ್ಶನದ ಬಳಿಕ ಮಾತನಾಡಿದ ಇಶಾನ್ ಕಿಶನ್ ಸಂತಸವನ್ನು ಹಂಚಿಕೊಮಡಿದ್ದಾರೆ. ಈ ಸಂದರ್ಭದಲ್ಲಿ ತನ್ನ ಬ್ಯಾಟ್‌ನಿಂದ ಬಿಗ್ ಹೊಟ್ ಸಿಡಿಯಲು ತನ್ನ ಅಮ್ಮನೇ ಕಾರಣ ಎಂದಿದ್ದಾರೆ. ಅಮ್ಮ ಮಾಡಿಕೊಡುವ ಆಹಾರಗಳ ಕಾರಣದಿಂದಲೇ ಬಲ ವೃದ್ಧಿಸಿಕೊಂಡು ಸಿಕ್ಸರ್ ಸಿಡಿಸುವುದಾಗಿ ಹೇಳಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗಾಯಾಳಾಗಿರುವುದರಿಂದ ಕಲೆದ ಕೆಲ ಪಂದ್ಯಗಳ್ಲಲಿ ಕಣಕ್ಕೆ ಇಳಿಯುತ್ತಿಲ್ಲ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರ ಆರಮಭಿಕ ಸ್ಥಾನದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುತ್ತಿದ್ದಾರೆ. ಇದರಲ್ಲಿ ಅದ್ಭುತ ಪ್ರದರ್ಶನವನ್ನು ನೀಡುವಲ್ಲೂ ಇಶಾನ್ ಕಿಶನ್ ಸಫಲರಾಗುತ್ತಿದ್ದಾರೆ.

22ರ ಹರೆಯದ ಇಶಾನ್ ಕಿಶನ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಸಿ ಮಿಂಚಿದ್ದರು. ಈ ಮೂಲಕ ಗೆಲುವನ್ನು ಸುಲಭವಾಗಿಸಿದ್ದರು. ಮುಂಬೈ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 34 ಎಸೆತಗಳು ಹಾಗೂ 9 ವಿಕೆಟ್ ಉಳಿಸಿಕೊಂಡು ಗೆಲುವನ್ನು ಸಾಧಿಸಿದೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಕಿಶನ್ "ನನ್ನನ್ನು ಶಕ್ತಿಯುತನನ್ನಾಗಿ ಮಾಡಲು ಕಾರಣರಾದ ನನ್ನ ತಾಯಿಗೆ ಈ ಕ್ರಿಡೆಟ್ ಸಲ್ಲಲೇಬೇಕು. ಅವರು ನೀಡುವ ಉತ್ತಮ ಆಹಾರದಿಂದಾಗಿ ನಾನು ಶಕ್ತಿ ಪಡೆದು ಸಿಕ್ಸರ್ ಬಾರಿಸಲು ಸಾಧ್ಯವಾಗುತ್ತಿದೆ. ಕೆಲವೊಮ್ಮೆ ದೊಡ್ಡ ಸಿಕ್ಸರ್ ಸಿಡಿದಾಗ ನನಗೇ ಆಶ್ವರ್ಯವುಂಟಾಗುತ್ತದೆ" ಎಂದಿದ್ದಾರೆ ಇಶಾನ್ ಕಿಶನ್

Story first published: Saturday, October 31, 2020, 20:46 [IST]
Other articles published on Oct 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+