Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಶಾನ್ ಕಿಶನ್ ವಿಶೇಷ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ: ಯುವರಾಜ್ ಸಿಂಗ್

IPL 2020: Ishan Kishan is very special player in the making says Yuvraj Singh

ಮುಂಬೈ ಇಂಡಿಯನ್ಸ್ ತಂಡದ ಅದ್ಭುತ ಯಶಸ್ಸಿನಲ್ಲಿ ಯುವ ಆಟಗಾರ ಇಶಾನ್ ಕಿಶನ್ ಪಾತ್ರವೂ ಇದೆ. ಈ ಬಾರಿಯ ಟೂರ್ನಿಯಲ್ಲಿ ಇಶಾನ್ ಕಿಶನ್ ತನಗೆ ನೀಡಿದ ಜವಾಬ್ಧಾರಿಯನ್ನು ಅತ್ಯಂತ ಜವಾಬ್ಧಾರಿಯುತವಾಗಿ ನಿರ್ವಹಿಸಿದ್ದು ಮಾತ್ರವಲ್ಲದೆ ತನ್ನ ಸಾಮರ್ಥ್ಯವೇನೆಂಬುದನ್ನು ಸಾಬೀತುಪಡಿಸಿದರು.

ಈ ಬಾರಿಯ ಆವೃತ್ತಿಯಲ್ಲಿ ಇಶಾನ್ ಕಿಶನ್ 14 ಪಂದ್ಯಗಳಲ್ಲಿ ಕಣಕ್ಕಿಳಿದು 516 ರನ್ ಗಳಿಸಿದ್ದಾರೆ. ಡೆಲ್ಲಿ ವಿರುದ್ದದ ಫೈನಲ್ ಪಂದ್ಯದಲ್ಲೂ ಇಶಾನ್ ಕಿಶನ್ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಡೆಲ್ಲಿ ತಂಡ ನೀಡಿದ್ದ 157 ರನ್‌ಗಳನ್ನು ಬೆನ್ನಟ್ಟಿದ ಮುಂಬೈ ಪರವಾಗಿ 33 ರನ್‌ಗಳನ್ನು ಬಾರಿಸಿದ್ದಲ್ಲದೆ ಅಜೇಯವಾಗಿ ಉಳಿದರು.

ಈ ಅದ್ಭುತ್ ಪ್ರದರ್ಶನದ ಬಳಿಕ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಟ್ವೀಟ್‌ನಲ್ಲಿ ಮುಂಬೈ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಯುವರಾಜ ಸಿಂಗ್ ಇಶಾನ್ ಕಿಶನ್ ಬ್ಯಾಟಿಂಗ್ ಸಾಮರ್ಥ್ಯವ ಬಗ್ಗೆ ವಿಶೇಷವಾಗಿ ಕೊಂಡಾಡಿದ್ದಾರೆ.

"ಅಭಿನಂದನೆಗಳು ಮುಂಬೈ ಇಂಡಿಯನ್ಸ್, ಈವರೆಗಿನ ಅತ್ಯುತ್ತಮ ತಂಡ. ರೋಹಿತ್ ಶರ್ಮಾ ಅವರದ್ದು ಫೈನಲ್‌ನಲ್ಲಿ ನಾಯಕನ ಆಟ. ಡೆಲ್ಲಿ ತಂಡ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದೆ. ಇಶಾನ್ ಕಿಶನ್ ಅದ್ಭುತವಾದ ಆಟಗಾರನಾಗಿ ರೂಪುಗೊಳ್ಳುತ್ತಿದ್ದರೆ" ಎಂದು ಯುವಿ ಟ್ವೀಟ್ ಮಾಡಿದ್ದಾರೆ.

22ರ ಹರೆಯದ ಇಶಾನ್ ಕಿಶನ್ ಐಪಿಎಲ್‌ನಲ್ಲಿ ಈವರೆಗೆ ಮುಂಬೈ ಪರವಾಗಿ 51 ಪಂದ್ಯಗಳನ್ನು ಆಡಿದ್ದಾರೆ. 1211 ರನ್ ಗಳಿಸಿದ್ದು 7 ಅರ್ಧಶತಕವನ್ನು ಬಾರಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಈ ಬಾರಿಯ ಆವೃತ್ತಿಯಲ್ಲೇ ದಾಖಲಾಗಿದೆ. 30 ಸಿಕ್ಸರ್ ಬಾರಿಸಿದ ಇಶಾನ್ ಕಿಶನ್ ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಾಗಿದ್ದಾರೆ.

Story first published: Wednesday, November 11, 2020, 13:52 [IST]
Other articles published on Nov 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+