For Quick Alerts
ALLOW NOTIFICATIONS  
For Daily Alerts
 

ನೀವೇಕೆ ಅಷ್ಟು ರನ್ ನೀಡುತ್ತೀರಿ?: ಆರ್‌ಸಿಬಿ ಬೌಲರ್ ನೀಡಿದ ಉತ್ತರ ಇದು

IPL 2020: Isuru Udana Hilarious Reply After A Fan Asks Why Is He Conceding Much Runs

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಗಳು ಅತಿ ಹೆಚ್ಚು ಬೆಂಬಲ ನೀಡುತ್ತಿರುವ ತಂಡ ಯಾವುದು ಗೊತ್ತೇ? ರಾಯಲ್ ಚಾಲೆಂಜರ್ಸ್ ಬೆಂಗಳೂರು. ಏಕೆಂದರೆ ಶ್ರೀಲಂಕಾದ ಆಟಗಾರ ಇಸುರು ಉಡಾನಾ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಹೊರತಾಗಿ ಶ್ರೀಲಂಕಾದ ಯಾವ ಆಟಗಾರನೂ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದಿಲ್ಲ.

ಆದರೆ ಉಡಾನಾ ಇದುವರೆಗೂ ಅಂತಹ ಗಮನಾರ್ಹ ಪ್ರದರ್ಶನವನ್ನೇನೂ ನೀಡಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಅವರು 12 ಓವರ್‌ಗಳನ್ನು ಬೌಲ್ ಮಾಡಿ 126 ರನ್ ಗಳಿಸಿದ್ದಾರೆ. ಅಂದರೆ 10.50ರ ಎಕಾನಮಿಯನ್ನು ರನ್ ಸೋರಿಕೆ ಮಾಡಿದ್ದಾರೆ. ಎದುರಾಳಿ ತಂಡಗಳ ಐದು ವಿಕೆಟ್‌ಗಳನ್ನು ಅವರು ಪಡೆದಿದ್ದಾರೆ.

ಟಿ20 ಕ್ರಿಕೆಟ್ ಎನ್ನುವುದು ಬ್ಯಾಟ್ಸ್‌ಮನ್‌ಗಳ ಆಟ. ಇಲ್ಲಿ ಬೌಂಡರಿ ಸಿಕ್ಸರ್‌ಗಳು ಸರಾಗವಾಗಿ ಹರಿದುಬರುತ್ತದೆ. ಇಲ್ಲಿ ಬೌಲರ್‌ಗಳು ಮಿಂಚುವುದು ಸುಲಭವಲ್ಲ. ಅದರಲ್ಲಿಯೂ ಪವರ್ ಪ್ಲೇ ಮತ್ತು ಡೆತ್ ಓವರ್‌ಗಳು ಸಾಮಾನ್ಯವಾಗಿ ಬೌಲರ್‌ಗಳ ಮಾರಣಹೋಗಮೇ ನಡೆಯುತ್ತದೆ.

ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಇಸುರು ಉಡಾನಾ ನಾಲ್ಕು ಓವರ್‌ಗಳಲ್ಲಿ 40 ರನ್ ಬಿಟ್ಟುಕೊಟ್ಟಿದ್ದರು. ಶಿಖರ್ ಧವನ್ ವಿಕೆಟ್ ಪಡೆದಿದ್ದೇ ಸಮಾಧಾನದ ಸಂಗತಿ. ಇದಕ್ಕೆ ಕ್ರಿಕೆಟ್ ಅಭಿಮಾನಿಯೊಬ್ಬರು ಅವರಿಗೆ ಇನ್‌ಸ್ಟಾಗ್ರಾಂನಲ್ಲಿ, 'ಪವರ್ ಪ್ಲೇನಲ್ಲಿ ನೀವು ಇಷ್ಟೊಂದು ರನ್ ಏಕೆ ಕೊಡುತ್ತಿದ್ದೀರಿ?' ಎಂದು ಕೆಣಕಿದ್ದರು.

ಇದಕ್ಕೆ ಉಡಾನಾ, ಅಷ್ಟೇ ತಮಾಷೆಯಾಗಿ ಉತ್ತರ ನೀಡಿದ್ದಾರೆ. 'ಏಕೆಂದರೆ ಬ್ಯಾಟ್ಟ್‌ಮನ್ ತನ್ನ ಬ್ಯಾಟ್ ಜತೆ ಬಂದಿರುತ್ತಾನೆ' ಎಂದು ಉಡಾನಾ ಹೇಳಿದ್ದಾರೆ. ಉಡಾನಾ ಅವರನ್ನು ಆರ್‌ಸಿಬಿ 50 ಲಕ್ಷ ರೂ ನೀಡಿ ಖರೀದಿಸಿತ್ತು.

Story first published: Friday, October 9, 2020, 18:05 [IST]
Other articles published on Oct 9, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+