ಇದು ಯೂನಿವರ್ಸ್ ಬಾಸ್, ಹೇಗೆ ನರ್ವಸ್ ಆಗಲಿ: ಪಂದ್ಯದ ಬಳಿಕ ಗೇಲ್ ಪ್ರತಿಕ್ರಿಯೆ

ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಕಣಕ್ಕಿಳಿದು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿದ ಗೇಲ್ ಭರ್ಜರಿ ಅರ್ಧ ಶತಕವನ್ನು ಸಿಡಿಸಿ ತನ್ನಲ್ಲಿ ಬ್ಯಾಟಿಂಗ್ ಸಾಮರ್ಥ್ಯ ಇನ್ನೂ ಇದೆ ಎಂದು ವ್ಯಕ್ತಪಡಿಸುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿನಿಲ್ಲೂ ಪ್ರಮುಖ ಪಾತ್ರವಹಿಸಿದರು.
ಆದರೆ ಕ್ರಿಸ್ ಗೇಲ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಎಂದಿನಂತೆ ಆರಂಭಿಕನಾಗಿ ಕಣಕ್ಕೆ ಇಳಿಯದೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಸುದೀರ್ಘ ಕಾಲದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿರುವ ಜೊತೆಗೆ ತಮ್ಮ ಸಾಮಾನ್ಯ ಕ್ರಮಾಂಕವಲ್ಲದ ಕಾರಣ ಮೂರನೇ ಕ್ರಮಾಂಕದಲ್ಲಿ ಕಣದ ಕಾರಣ ನರ್ವಸ್ ಆಗಿದ್ದಿರಾ ಎಂಬ ಪ್ರಶ್ನೆ ಕ್ರಿಸ್ ಗೇಲ್‌ಗೆ ಎದುರಾಗಿತ್ತು.
ಕ್ರಿಸ್ ಗೇಲ್‌ಗೆ ಎದುರಾದ ಈ ಪ್ರಶ್ನೆಗೆ ತಮ್ಮ ಶೈಲಿಯಲ್ಲಿಯೇ ಉತ್ತರವನ್ನು ನೀಡಿದ್ದಾರೆ. ನಾನು ನರ್ವಸ್ ಖಂಡಿತಾ ಆಗಿರಲಿಲ್ಲ. ಕಮ್‌ಆನ್ ಇದು ಯೂನಿವರ್ಸ್ ಬಾಸ್. ನಾನು ಹೇಗೆ ನರ್ವಸ್ ಆಗಿರಲು ಸಾಧ್ಯ ಎಂದು ಕ್ರಿಸ್ ಗೇಲ್ ಪಂದ್ಯದ ಮುಕ್ತಾಯದ ಬಳಿಕ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ಗೆ ಪ್ರತಿಕ್ರಿಯಿಸಿದರು.
ಇನ್ನು ತಾನು ಯಾಕೆ ಮೂರನೇ ಕ್ರಮಾಂಕದಲ್ಲಿ ಇಳಿದೆ ಎಂಬುದಕ್ಕೂ ಗೇಲ್ ಉತ್ತರವನ್ನು ನೀಡಿದ್ದಾರೆ. "ತಂಡ ನನ್ನಲ್ಲಿ ಮೂರನೇ ಕ್ರಮಾಂಕದ ಜವಾಬ್ಧಾರಿಯನ್ನು ತೆಗೆದುಕೊಳ್ಳುವಂತೆ ಕೇಳಿತ್ತು. ನನಗೆ ಅದು ಸಮಸ್ಯೆಯೇ ಆಗಿರಲಿಲ್ಲ. ಟೂರ್ನಿಯುದ್ಧಕ್ಕೂ ನಮ್ಮ ಆರಮಭಿಕರು ಉತ್ತಮ ಪ್ರದರ್ಶನವನ್ನು ನೀಡಿಕೊಂಡು ಬರುತ್ತಿದ್ದಾರೆ. ನಾವು ಅವರಿಗೆ ತೊಂದರೆಗೊಳಿಸಲು ಬಯಸುವುದಿಲ್ಲ. ನೀವು ಕೊಡುವ ಜವಾಬ್ಧಾರಿಯನ್ನು ನಾನು ನಿರ್ವಹಿಸುತ್ತೇನೆ. ಬ್ಯಾಟ್‌ನ ಸ್ಟಿಕ್ಕರ್‌ನಲ್ಲಿ ಬರೆದಿರುವ ಹೆಸರಿಗೆ(ಯೂನಿವರ್ಸ್ ಬಾಸ್) ಗೌರವ ಕೊಡಿ" ಎಂದು ಕ್ರಿಸ್ ಗೇಲ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕ್ರಿಸ್ ಗೇಲ್ ಆರಂಭಿಕ ಕೆಲ ಪಂದ್ಯಗಳಲ್ಲಿ ತಂಡದಲ್ಲಿ ಆಟಗಾರರ ಸಂಯೋಜನೆ ಹೊಂದಾಣಿಕೆಯ ಕಾರಣದಿಂದ ಅನಿವಾರ್ಯವಾಗಿ ಹೊರಗುಳಿದಿದ್ದರು. ಅದರ ಬಳಿಕ ಗೇಲ್ ಹೊಟ್ಟೆನೋವಿಗೆ ಒಳಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈಗ ಕ್ರಿಸ್ ಗೇಲ್ ಮತ್ತೆ ತಂಡಕ್ಕೆ ಸೇರಿಕೊಂಡಿದ್ದು ತಮ್ಮ ಅದ್ಭುತ ಪ್ರದರ್ಶನವನ್ನು ನೀಡುವಲ್ಲಿ ಮೊದಲ ಪಂದ್ಯದಲ್ಲೇ ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications