Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇದೊಂದು ಪರಿಪೂರ್ಣ ಪಂದ್ಯವಾಗಿತ್ತು: ಗೆಲುವಿನ ಬಳಿಕ ವಾರ್ನರ್ ಹೇಳಿಕೆ

IPL 2020: It’s Been A Complete Game: David Warner After SRH’s Win

ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಬಳಗ ಭರ್ಜರಿ ಗೆಲುವನ್ನು ಸಾಧಿಸಿದೆ. ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವನ್ನು ಸಾಧಿಸಿದ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲು ಪಂಜಾಬ್ ಜೊತೆಗೆ ಪೈಪೋಟಿಗೆ ಇಳಿದಿದೆ. ಈ ಗೆಲುವಿನ ಬಳಿಕ ಡೇವಿಡ್ ವಾರ್ನರ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

"ಪಂದ್ಯವನ್ನು ನಾವು ಆರಂಭಿಸಿದ ರೀತಿ ಅದ್ಭುತವಾಗಿತ್ತು. ಪವರ್‌ಪ್ಲೇಯ ನಂತರ ಪಂದ್ಯವನ್ನು ಹತೋಟಿಗೆ ತೆಗೆದುಕೊಳ್ಳಲು ಯಶಸ್ವಿಯಾದೆವು. ನಾವು ಈವರೆಗೆ ಬಯಸಿದ ರೀತಿಯ ಪರಿಪೂರ್ಣವಾದ ಪಂದ್ಯ ಇದಾಗಿದೆ. ಇಬ್ಬರು ಆಟಗಾರರು ಈ ಗೆಲುವಿಗೆ ಕಾರಣವಾಗಿತ್ತು ಸಂತಸವಾಗುತ್ತದೆ" ಎಂದು ವಾರ್ನರ್ ಪಂದ್ಯದ ಮುಕ್ತಾಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಇನ್ನಿಂಗ್ಸ್‌ನ ಮೂರನೇ ಎಸೆತಕ್ಕೆ ಆರ್ಚರ್‌ಗೆ ಬಲಿಯಾದಾಗ ನಾನು ಹತಾಶೆಗೆ ಒಳಗಾದೆ ಎಂದು ಹೇಳಿದ ಡೇವಿಡ್ ವಾರ್ನರ್ ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಬೌಲಿಂಗ್‌ನಲ್ಲಿ ಮಿಂಚಿದ ಜೇಸನ್ ಹೋಲ್ಡರ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಸನ್‌ರೈಸರ್ಸ್ ನಾಯಕ.

"ನಾನು ಹತಾಶೆಗೆ ಒಳಗಾಗಿದ್ದೆ. ಮೊದಲ ಓವರ್‌ನಿಂದಲೇ ಮುನ್ನುಗ್ಗಲು ನೀವು ಮುನ್ನುಗ್ಗಲು ಪ್ರಯತ್ನಿಸುತ್ತೀರಿ. ಆದರೆ 150 ಕಿಮೀ ವೇಗದಲ್ಲಿ ಬೌಲಿಂಗ್ ನಡೆಸುತ್ತಿರುವಾದ ನೀವು ಹೆಚ್ಚಿನದನ್ನು ನಡೆಸಲು ಸಾಧ್ಯವಿಲ್ಲ" ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಪ್ರದರ್ಶನವನ್ನು ಕೂಡ ಡೇವಿಡ್ ವಾರ್ನರ್ ಕೊಂಡಾಡಿದ್ದಾರೆ. ಈ ಗೆಲುವಿನ ಮೂಲಕ ಸನ್‌ರೈಸರ್ಸ್ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

Story first published: Friday, October 23, 2020, 10:14 [IST]
Other articles published on Oct 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+