For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಹೈದರಾಬಾದ್‌ಗೆ 155 ರನ್‌ಗಳ ಟಾರ್ಗೆಟ್ ನೀಡಿದ ರಾಜಸ್ಥಾನ್

IPL 2020: Jason Holder’s magic restrict Rajasthan Royals to 154/6

ಐಪಿಎಲ್‌ನ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ರಾಯಲ್ಸ್ ತಂಡ ಎದುರಾಳಿಗೆ 155 ರನ್‌ಗಳ ಗುರಿಯನ್ನು ನೀಡಿದೆ.

ಬೌಲರ್‌ಗಳಿಗೆ ಸಹಕಾರಿಯಾಗಬಲ್ಲ ಪಿಚ್‌ನಲ್ಲಿ ಆರ್‌ಸಿಬಿ ದಾಂಡಿಗರು ಹೋರಾಟದ ಪ್ರದರ್ಶನವನ್ನು ನೀಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಮಯೋಚಿತ ಪ್ರದರ್ಶನವನ್ನು ನೀಡಿದ ಕಾರಣ 154 ರನ್‌ಗಳನ್ನು ಗಳಿಸಲು ರಾಜಸ್ಥಾನ್ ತಂಡಕ್ಕೆ ಸಾಧ್ಯವಾಯಿತು.

ಬೆನ್ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಇಂದಿನ ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ವಿಕೆಟ್‌ಗೆ ಈ ಜೋಡಿ 30 ರನ್ ಗಳನ್ನು ಸೇರಿಸಿದ ಬಳಿಕ ಉತ್ತಪ್ಪ ರನ್‌ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನು ಎದುರಿಸಿದ ಉತ್ತಪ್ಪ 19 ರನ್ ಗಳಿಸಿದ್ದರು. ಬಳಿಕ ಸ್ಟೋಕ್ಸ್(30ರನ್) ಹಾಗೂ ಸಂಜು ಸ್ಯಾಮ್ಸನ್(36ರನ್) ಕೂಡ ಉತ್ತಮ ಜೊತೆಯಾಟವನ್ನು ಪ್ರದರ್ಶಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಬಟ್ಲರ್(6 ರನ್) ಈ ಪಂದ್ಯದಲ್ಲಿ ವಿಫಲರಾದರು. ಸ್ಟೀವ್ ಸ್ಮಿತ್ 19 ರನ್ ಗಳಿಸಿದರೆ ರಿಯಾನ್ ಪರಾಗ್ 12 ಎಸೆತಗಳಲ್ಲಿ 20 ರನ್‌ಗಳನ್ನು ಸಿಡಿಸದರು. ಅಂತಿಮ ಹಂತದಲ್ಲಿ ಜೋಫ್ರಾ ಆರ್ಚರ್ 7 ಎಸೆಗಳನ್ನು ಎದುರಿಸಿ 16 ರನ್ ಗಳಿಸಿ 154 ರನ್‌ಗಳ ಗೌರವಯುತ ಮೊತ್ತ ಪೇರಿಸಲು ಕಾರಣರಾದರು.

ಇಂದಿನ ಪಂದ್ಯದ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಜೇಸನ್ ಹೋಲ್ಡರ್ ಹೈದರಾಬಾದ್ ಬೌಲಿಂಗ್‌ನಲ್ಲಿ ಮಿಂಚಿದರು. 4 ಓವರ್‌ಗಳಲ್ಲಿ ಹೋಲ್ಡರ್ 33 ರನ್‌ಗಳನ್ನು ನೀಡಿ 3 ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು.

Story first published: Friday, October 23, 2020, 10:22 [IST]
Other articles published on Oct 23, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+