Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Video: ಪೃಥ್ವಿ ಶಾ ವಿಕೆಟ್ ಕಿತ್ತ ಖುಷಿಯಲ್ಲಿ ಜೋಫ್ರಾ ಆರ್ಚರ್ ಡ್ಯಾನ್ಸ್

IPL 2020: Jofra Archer does bihu Dance with Riyan Parag

ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಉತ್ತಮ ಬೌಲಿಂಗ್ ಮಾತ್ರವಲ್ಲ, ಸಕತ್ ಡ್ಯಾನ್ಸ್ ಮೂಲಕವೂ ಸದ್ದು ಮಾಡಿದ್ದಾರೆ.

ದೆಹಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಪೃಥ್ವಿರಾಜ್ ಶಾ ಅವರನ್ನು ಕ್ಲೀನ್ ಬೋಲ್ಡ್ ಮಾಡಿದ ಜೋಫ್ರಾ ಆರ್ಚರ್ ನಂತರ ಇನ್ನಿಂಗ್ಸ್ ಬ್ರೇಕ್ ನಲ್ಲಿ ವಿಕೆಟ್ ಕಿತ್ತ ಸಂಭ್ರಮವನ್ನು ವಿಶಿಷ್ಟ ಡ್ಯಾನ್ಸ್ ಮೂಲಕ ಆಚರಿಸಿದ್ದಾರೆ. ಆರ್ಚರ್ ಅವರು ಬಿಹು ಡ್ಯಾನ್ಸ್ ಮಾಡಿದ್ದನ್ನು ಐಪಿಎಲ್ ಅಧಿಕೃತ ಟ್ವೀಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಬಿಹು ಡ್ಯಾನ್ಸ್ ಮಾಡ ಆರ್ಚರ್ ಜೊತೆಗೆ ರಿಯಾನ್ ಪರಾಗ್ ಸಾಥ ನೀಡಿದ್ದಾರೆ. ಐಪಿಎಲ್ 2020ರಲ್ಲಿ ಮೊದಲ ಬಾರಿಗೆ ಆಸ್ಸಾಂನ ಸಾಂಪ್ರದಾಯಿಕ ಬಿಹು ನೃತ್ಯಶೈಲಿಯನ್ನು ರಿಯಾನ್ ಪರಾಗ್ ಅವರೇ ಪರಿಚಯಿಸಿದ್ದು ಎಂದರೆ ತಪ್ಪಾಗಲಾರದು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ರಿಯಾನ್ ಪರಾಗ್ ಮತ್ತು ರಾಹುಲ್ ತೇವಾಟಿಯಾ ತಂಡದ ಅದ್ಭುತ ಜೊತೆಯಾಟವಾಡಿ ಗೆಲುವಿಗೆ ಕಾರಣರಾಗಿದ್ದರು. 42 ರನ್‌ ಗಳಿಸಿ ಅಜೇಯರಾಗಿ ಉಳಿದ ಪರಾಗ್ ಸಿಕ್ಸರ್‌ ಮೂಲಕ ಗೆಲುವಿನ ರನ್ ಗಳಿಸಿದ್ದರು. ನಂತರ ಸೊಂಟದ ಮೇಲೆ ಕೈಯಿಟ್ಟುಕೊಂಡು ಅಸ್ಸಾಮಿಗಳ ರೀತಿಯಲ್ಲಿ ಬಿಹು ನೃತ್ಯ ಮಾಡಿದ್ದರು.

ಬಿಹು ಡ್ಯಾನ್ಸ್ ನೋಡಿದ್ದ ಆರ್ಚರ್ ಇಂದು ತಾವು ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಇವರಿಬ್ಬರ ಡ್ಯಾನ್ಸ್ ನೋಡಿ ಅಭಿಮಾನಿಗಳು ವಾಹ್ ಎಂದಿದ್ದಾರೆ. ಇಂಗ್ಲೆಂಡಿನ ಕಾಮೆಂಟೆಟರ್ಸ್ ಕೂಡಾ ಇಂಗ್ಲೀಷ್ ಆಟಗಾರನೊಬ್ಬ ಡ್ಯಾನ್ಸ್ ಮಾಡಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Story first published: Thursday, October 15, 2020, 10:06 [IST]
Other articles published on Oct 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+