
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯ ಡ್ಯಾನ್ಸ್ ವಿಡಿಯೋ ಒಂದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
ಅಕ್ಟೋಬರ್ 15ರಂದು ಕಿಂಗ್ಸ್ XI ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಮೈದಾನಕ್ಕಿಳಿದಿದ್ದ ವಿರಾಟ್ ಕೊಹ್ಲಿ ತುಂಬಾ ಜೋಶ್‌ನಲ್ಲಿದ್ದರು. ಅಭ್ಯಾಸ ಮಾಡುತ್ತಲೇ ಕೆಲ ಸ್ಟೆಪ್‌ಗಳನ್ನೂ ಹಾಕಿದ್ದರು. ಕೊಹ್ಲಿ ಡ್ಯಾನ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಡಿಯೋಗೆ ಆರ್ಚರ್ ಪ್ರತಿಕ್ರಿಯಿಸಿದ್ದಾರೆ.
ಕೊಹ್ಲಿ ವಿಡಿಯೋಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಆರ್ಚರ್, 'ಆಕೆ ಹೇಳಿದಾಗ ಹೋಗಿ ನೀನು ಬಾಗಿಲು ಹಾಕಿಕೊಳ್ಳು' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಆರ್ಚರ್ ಈ ಸಾಲುಗಳು ನಾನಾರ್ಥ ಕೊಡುವಂತಿವೆ. ಹೆಂಡತಿ ಕುಣಿಯಲು ಹೇಳಿದಾಗ ಹೋಗು ಆದ್ರೆ ಡೋರ್ ಲಾಕ್ ಮಾಡಿಕೋ' ಎಂದು ಆರ್ಚರ್ ತಮಾಷೆಯಾಗಿ ಕಾಲೆಳೆದಂತಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಒಳ್ಳೆ ಜೋಶ್‌ನಲ್ಲಿದ್ದರಾದರೂ ಪಂದ್ಯ ಗೆಲ್ಲಲಾಗಿಲ್ಲ. ಕೊಹ್ಲಿ 48 ರನ್ ಕೊಡುಗೆ ನೀಡಿದ್ದರು. ಆದರೆ ಪಂಜಾಬ್‌ನಲ್ಲಿ ಕೆಎಲ್ ರಾಹುಲ್ ಮತ್ತು ಕ್ರಿಸ್ ಗೇಲ್ ಉತ್ತಮ ಬ್ಯಾಟಿಂಗ್ ನೀಡಿದ್ದರು. ಪಂಜಾಬ್ 8 ವಿಕೆಟ್‌ನಿಂದ ಪಂದ್ಯ ಗೆದ್ದಿತ್ತು.