ಐಪಿಎಲ್ 2020: ಭಾರತೀಯನ ಕೊಂಡಾಡಿದ ಜಾಂಟಿ ರೋಡ್ಸ್

ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಈ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪಂಜಾಬ್‌ನಲ್ಲಿ ಟಾಪ್ ಆರ್ಡರ್‌ನಲ್ಲಿ ಬರುವ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. ಇಬ್ಬರ ಜೊತೆಯಾಟ ಟೀಮ್ ಇಂಡಿಯಾದಲ್ಲಿನ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿಯನ್ನೂ ಮೀರಿಸುವಂತಿದೆ.
ಸದ್ಯ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ರಾಹುಲ್ 540 ರನ್ ಕಲೆ ಹಾಕಿದ್ದಾರೆ. ಇನ್ನು ಮಯಾಂಕ್ ಅಗರ್ವಾಲ್ ಇದೇ ಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದಿದ್ದು 398 ರನ್ ಗಳಿಸಿದ್ದಾರೆ.
ಕಿಂಗ್ಸ್ 11 ಪಂಜಾಬ್ ತಂಡದ ಪೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್, ಭಾರತೀಯ ಬ್ಯಾಟ್ಸ್‌ಮನ್‌ಗಳಾದ ರಾಹುಲ್ ಮತ್ತು ಮಯಾಂಕ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾನೊಬ್ಬ ಬರೀ ಟೆಸ್ಟ್ ಆಟಗಾರನಲ್ಲ ಅನ್ನೋದನ್ನು ಮಯಾಂಕ್ ಸಾಭೀತುಪಡಿಸಿದ್ದಾರೆ ಎಂದು ರೋಡ್ಸ್ ಹೇಳಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ರೋಡ್ಸ್, 'ಮಯಾಂಕ್-ರಾಹುಲ್ ಆಟ ಅದ್ಭುತವಾಗಿದೆ. ಇದು ಭಾರತೀಯ ಕ್ರಿಕೆಟ್‌ನ ಶಕ್ತಿಯನ್ನು ಸೂಚಿಸುತ್ತಿದೆ. ರೋಹಿತ್ ಶರ್ಮಾ ಬಗ್ಗೆ ಯೋಚಿಸಿ, ಅವರು ಭಾರತ ತಂಡಕ್ಕೆ ಬರಲು ಎಷ್ಟು ಸಮಯ ತೆಗೆದುಕೊಂಡಿದ್ದಾರೆ. ಮಯಾಂಕ್‌ನಂತ ಆಟಗಾರ ತಾನು ಬರೀ ಟೆಸ್ಟ್ ಆಟಗಾರ ಅನ್ನುವುದಕ್ಕಿಂತ ಮಿಗಿಲು ಎಂದು ತೋರಿಸಿದ್ದಾರೆ,' ರೋಡ್ಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications