ಸೋಲುಗಳು ಇದ್ದಿದ್ದೇ, ಡೆಲ್ಲಿ ಭಯ ಪಡುವ ಅಗತ್ಯವಿಲ್ಲ: ಕಾಗಿಸೊ ರಬಾಡ

ದುಬೈ: ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ 11 ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲನುಭವಿಸಿತ್ತು. ಆದರೆ ಈಗಲೂ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಕೂಡ ಸೋಲಿಗಾಗಿ ಡೆಲ್ಲಿ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
'ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋತಿದ್ದು ನಮಗೆ ಎಚ್ಚರಿಕೆ ಕರೆಗಂಟೆ ಎಂದು ನಾನು ಭಾವಿಸುವುದಿಲ್ಲ. ಯಾಕೆಂದರೆ ಸೋಲುಗಳು ಇದ್ದಿದ್ದೆ. ಸೋಲುಗಳು ನಡೆಯುತ್ತಿರುತ್ತವೆ. ಇದರರ್ಥ ನಾವು ಭಯಪಡುವ ಅಗತ್ಯವಿಲ್ಲ. ತಂಡ ಸರಿದಾರಿಗೆ ಬರಲು ನಾವು ಪ್ರಯತ್ನ ಮುಂದುವರೆಸಬೇಕಷ್ಟೇ,' ಎಂದು ಕಾಗಿಸೊ ರಬಾಡ ಹೇಳಿದ್ದಾರೆ.
'ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನು ನಾವು ತಿಳಿದುಕೊಳ್ಳಬೇಕಿದೆ. ನಾವಿದನ್ನು ಈ ಮೊದಲೂ ಮಾಡಿದ್ದೇವೆ. ಆವತ್ತಿನ ಪಂದ್ಯದ ಬಗ್ಗೆ ನಾವು ಎಲ್ಲಿ ಸುಧಾರಣೆ ಮಾಡಿಕೊಳ್ಳಬೇಕೆಂದು ನಾವು ಮಾತನಾಡಿದ್ದೇವೆ. ಅದನ್ನು ತಲೆಯಲ್ಲಿಟ್ಟುಕೊಂಡು ಮುಂದೇನು ಮಾಡಬೇಕೆಂದು ಪ್ರಯತ್ನಿಸಬೇಕಿದೆ,' ಎಂದು ರಬಾಡ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಅಂಕಪಟ್ಟಿಲ್ಲಿ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿವೆ. ಡೆಲ್ಲಿಗೆ ಮುಂದೆ ಅಕ್ಟೋಬರ್ 24ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications