ಆತನೊಬ್ಬ ದೊಡ್ಡ ಪ್ರತಿಭೆ: ಭಾರತೀಯನ ಶ್ಲಾಘಿಸಿದ ಕೇನ್ ವಿಲಿಯಮ್ಸನ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸ್ಫೂರ್ತಿಯ ಹೋರಾಟ ನಡೆಸಿ ಗಮನ ಸೆಳೆದಿದೆ. ಕ್ವಾಲಿಫೈಯರ್ 2ಕ್ಕೆ ಪ್ರವೇಶಿಸಿದ್ದ ಹೈದರಾಬಾದ್, ಡೆಲ್ಲಿ ವಿರುದ್ಧ 17 ರನ್‌ನಿಂದ ಸೋತು ನಿರ್ಗಮಿಸಿದೆ. ಡೆಲ್ಲಿ ಫೈನಲ್‌ಗೆ ಪ್ರವೇಶಿಸಿದೆ.
ವೃದ್ಧಿಮಾನ್ ಸಹಾ, ಭುವನೇಶ್ವರ್ ಕುಮಾರ್ ಗಾಯ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಹಿನ್ನಡೆಗೆ ನೆಪವೆನಿಸಿದೆ. ಸಹಾ ಇಲ್ಲದ ಕಾರಣ ಭಾನುವಾರದ ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 190 ರನ್ ಗುರಿ ಬೆನ್ನಟ್ಟಿದ್ದ ಎಸ್‌ಆರ್‌ಎಚ್ ಪರ ಯುವ ಬ್ಯಾಟ್ಸ್‌ಮನ್ ಪ್ರಿಯಮ್ ಗರ್ಗ್ ಆರಂಭಿಕರಾಗಿ ಬಂದಿದ್ದರು.
ನಾಯಕ ಡೇವಿಡ್ ವಾರ್ನರ್ ಜೊತೆಗೆ ಆರಂಭಿಕರಾಗಿ ಬಂದಿದ್ದ ಪ್ರಿಯಮ್ ಗರ್ಗ್, 12 ರನ್ ಬಾರಿಸಿ ಮಾರ್ಕಸ್ ಸ್ಟೋಯ್ನಿಸ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಆರಂಭಿಕರಾಗಿ ಗರ್ಗ್ ಇಳಿಸಿದ್ದರ ಬಗ್ಗೆ ಎಸ್‌ಆರ್‌ಎಚ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿದ್ದಾರೆ.
'ನಿಜವಾದ ಯೋಚನೆ ಏನಿತ್ತೋ ನನಗೆ ಗೊತ್ತಿಲ್ಲ. ಆದರೆ ನನಗೆ ಪ್ರಿಯಮ್ ಗರ್ಗ್ ದೊಡ್ಡ ಪ್ರತಿಭೆ ಅನ್ನಿಸುತ್ತಿದೆ. ಅದೇ ಕಾರಣಕ್ಕೆ ಅವರಿಗೆ ಈ ಟೂರ್ನಿಯುದ್ದಕ್ಕೂ ಹೆಚ್ಚಿನ ಅವಕಾಶಗಳನ್ನು ನೀಡಲಾಗಿತ್ತು. ಭವಿಷ್ಯದಲ್ಲಿ ಅವರು ಒಳ್ಳೆಯ ಆಟಗಾರ ಅನ್ನಿಸಿಕೊಳ್ಳುತ್ತಾರೆ,' ಎಂದು ಕ್ವಾಲಿಫೈಯರ್ 2 ಪಂದ್ಯದ ಬಳಿಕ ವಿಲಿಯಮ್ಸನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications