ಎಂಐನ ಇಂಜಿನ್‌ನಂತಿರುವ 3 ಆಟಗಾರರ ಹೆಸರಿಸಿದ ಕೀರನ್ ಪೊಲಾರ್ಡ್

ದುಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೆಚ್ಚು ಬಲಿಷ್ಠ ತಂಡವಾಗಿ (ಈವರರಗಿನ ಮಟ್ಟಿಗೆ) ಕಾಣಿಸಿದೆ. ಡೆಲ್ಲಿ ಬಿಟ್ಟರೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಕೂಡ ಉತ್ತಮ ಸ್ಥಿತಿಯಲ್ಲಿದೆ. ಎಂಐನಲ್ಲಿ ಬಲಶಾಲಿ ಆಟಗಾರರಿದ್ದಾರೆ. ದೊಡ್ಡ ದೊಡೆತಗಾರರಿದ್ದಾರೆ.
ಭಾನುವಾರವಷ್ಟೇ ಮುಕ್ತಾಯಗೊಂಡ ಐಪಿಎಲ್ 18ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದಾರಾಬಾದ್ ವಿರುದ್ಧ ಮುಂಬೈ ತಂಡ 34 ರನ್‌ಗಳ ಭರ್ಜರಿ ಜಯ ಕಂಡಿತ್ತು. ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ 67, ಸೂರ್ಯಕುಮಾರ್ ಯಾದವ್ 27, ಇಶಾನ್ ಕಿಶನ್ 31 ರನ್ ಸೇರಿಸಿದ್ದರು.
ಅದರಲ್ಲೂ ಹಾರ್ದಿಕ್ ಪಾಂಡ್ಯ 19 ಎಸೆತಗಳಿಗೆ 28, ಕೀರನ್ ಪೊಲಾರ್ಡ್ 13 ಎಸೆತಗಳಿಗೆ 25 ರನ್, ಕೃನಾಲ್ ಪಾಂಡ್ಯ ಕೇವಲ 4 ಎಸೆತಗಳಿಗೆ 20 ರನ್ ಬಾರಿಸಿದ್ದರು. ಹೀಗಾಗಿಯೇ ಮುಂಬೈ ಇಂಡಿಯನ್ಸ್ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 208 ರನ್ ಕಲೆ ಹಾಕಿತ್ತು. ಅಲ್ಲದೆ ದೊಡ್ಡ ಅಂತರದಿಂದ ಪಂದ್ಯ ಗೆದ್ದಿತು.
ತಮ್ಮ ತಂಡದಲ್ಲಿರುವ ಮುಖ್ಯ ಆಟಗಾರರ ಬಗ್ಗೆ ಮಾತನಾಡಿದ ಪೊಲಾರ್ಡ್, 'ಒಂದು ಕಾರ್‌ನಲ್ಲಿನ ಇಂಜಿನ್ ರೂಮ್‌ನಲ್ಲಿರುವ ಇಂಜಿನ್‌ಗಳಂತೆ ನಮ್ಮನ್ನು ನಾವು (ಪೊಲಾರ್ಡ್, ಪಾಂಡ್ಯ ಬ್ರದರ್ಸ್) ನೋಡಿಕೊಳ್ಳುತ್ತೇವೆ. ಇಂಜಿನ್‌ಗಳಿಲ್ಲದೆ ನೀವು ಚಲಿಸಲು ಸಾಧ್ಯವಿಲ್ಲ,' ಎಂದರು.
ಮಾತು ಮುಂದುವರೆಸಿದ ಪೊಲಾರ್ಡ್, 'ನಾವು ಅಲ್ಲಿಗೆ ಹೋಗಬೇಕು. ವೇಗ ಹೆಚ್ಚಿಸಬೇಕು. ರನ್‌ರೇಟ್ ಮೇಲೆತ್ತಬೇಕಾಗಿ ಬರುತ್ತದೆ. ಕೆಲವು ದಿನ ಇದು ಆಗುತ್ತದೆ. ಕೆಲವುದಿನ ಇದು ಆಗೋದಿಲ್ಲ. ನಾನು ಮಾತ್ರ ಒಳ್ಳೆಯ ಆಟದತ್ತ ಮುಂದುವರೆಯಬೇಕಾಗುತ್ತದೆ,' ಎಂದು ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications