ಐಪಿಎಲ್ 2020: ಅಗಲಿದ ಮಾವನಿಗೆ ಅರ್ಧ ಶತಕ ಅರ್ಪಿಸಿದ ಕೆಕೆಆರ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದೆ. ಅದರಲ್ಲೂ ಆರಂಭಿಕ ಆಟಗಾರ ನಿತೀಶ್ ರಾಣಾ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸುನಿಲ್ ನರೈನ್ ಕೆಕೆಆರ್‌ನ ಬೃಹತ್ ಮೊತ್ತಕ್ಕೆ ಕಾರಣರಾದರು. ಡೆಲ್ಲಿ ವಿರುದ್ಧದ ಈ ಪಂದ್ಯದಲ್ಲಿ ಕೆಕೆಆರ್ 194/4 ರನ್ ಗಳಿಸಿತು.
ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ ನಿತೀಶ್ ರಾಣಾ 53 ಎಸೆತಗಳಲ್ಲಿ 81 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ ತಂಡಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದರು. ಆದರೆ ಅರ್ಧ ಶತಕವನ್ನು ಗಳಿಸಿದ ಬಳಿಕ ರಾಣಾ ಜರ್ಸಿಯೊಂದನ್ನು ತೋರಿಸಿ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ಅದಕ್ಕೆ ಭಾವನಾತ್ಮಕವಾದ ಕಾರಣವೂ ಇದೆ.
ನಿತೀಶ್ ರಾಣಾ ಅವರ ಮಾವ ಶುಕ್ರವಾರ ಮೃತಪಟ್ಟಿದ್ದಾರೆ. ನಿತೀಶ್ ರಾಣಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಅರ್ಧ ಶತಕವನ್ನು ಅಗಲಿದ ತನ್ನ ಮಾವನಿಗೆ ಅರ್ಪಿಸಿದ್ದಾರೆ. ಹೀಗಾಗಿ ಅರ್ಧ ಶತಕದ ಗಡಿಯನ್ನು ತಲುಪಿದ ಬಳಿಕ ರಾಣಾ ಮಾವ ಸುರಿಂದರ್ ಅವರ ಹೆಸರನ್ನು ಹೊಂದಿದ ಕೆಕೆಆರ್ ಜರ್ಸಿಯನ್ನು ತೋರಿಸಿ ಭಿನ್ನವಾಗಿ ಆಚರಿಸಿದ್ದಾರೆ.
ನಿತೀಶ್ ರಾಣಾ ಅವರು ಹೀಗೆ ತನ್ನ ಮಾವನಿಗೆ ಅರ್ಧ ಶತಕವನ್ನು ಅರ್ಪಿಸಿರುವ ವಿಚಾರವನ್ನು ಐಪಿಎಲ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಮಾಡಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ನಿತೀಶ್ ರಾಣಾ ಸಿಡಿಸಿದ 10ನೇ ಅರ್ಧ ಶತಕ ಇದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯ ಕೆಕೆಆರ್‌ಗೆ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಡೆಲ್ಲಿಗೆ 195 ರನ್‌ಗಳ ಗುರಿಯನ್ನು ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications