Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೀತಿ ಉಲ್ಲಂಘಿಸಿದ ಕೆಕೆಆರ್‌ನ ರಾಹುಲ್ ತ್ರಿಪಾಠಿಗೆ ಖಂಡನೆ

IPL 2020: KKR’s Rahul Tripathi reprimanded for breaching Code of Conduct

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನೀತಿ ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿಗೆ ಖಂಡನೆ ವ್ಯಕ್ತವಾಗಿದೆ. ಅಬುಧಾಬಿಯಲ್ಲಿ ನಡೆದ 35ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತ್ರಿಪಾಠಿಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

'ರಾಹುಲ್ ತ್ರಿಪಾಠಿ ಅವರು ಲೆವೆಲ್ 1ರಲ್ಲಿ 2.3ರ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಲೆವೆಲ್ 1ರ ಪ್ರಕಾರ ಅಂಪೈರ್ ತೀರ್ಮಾನವೇ ಅಂತಿಮ. ಅದನ್ನು ಮೀರುವಂತಿಲ್ಲ' ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆರಂಭಿಕರಾಗಿ ಬಂದಿದ್ದ ರಾಹುಲ್ ತ್ರಿಪಾಠಿ 16 ಎಸೆತಗಳಿಗೆ 23 ರನ್ ಬಾರಿಸಿದ್ದರು.

ಶುಬ್‌ಮನ್ ಗಿಲ್ ಜೊತೆ ತ್ರಿಪಾಠಿ 48 ರನ್‌ಗಳ ಜೊತೆಯಾಟ ನೀಡಿದ್ದರು. ಆದರೆ ಆ ಬಳಿಕ ಟಿ ನಟರಾಜನ್ ಓವರ್‌ನಲ್ಲಿ ತ್ರಿಪಾಠಿ ವಿಕೆಟ್ ಒಪ್ಪಿಸಿದರು. ಇನ್ನು ನಿತೀಶ್ ರಾಣಾ 29, ಇಯಾನ್ ಮಾರ್ಗನ್ 34, ದಿನೇಶ್ ಕಾರ್ತಿಕ್ 29 ರನ್‌ನೊಂದಿಗೆ ಕೆಕೆಆರ್ 163 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್‌ನಿಂದ ಜಾನಿ ಬೇರ್ಸ್ಟೋವ್ 36, ಕೇನ್ ವಿಲಿಯಮ್ಸನ್ 29, ನಾಯಕ ಡೇವಿಡ್ ವಾರ್ನರ್ 47, ಅಬ್ದುಲ್ ಸಮದ್ 23 ರನ್ ಬಾರಿಸಿದರು. ಎಸ್‌ಆರ್‌ಎಚ್ ಕೂಡ 20 ಓವರ್‌ಗೆ 6 ವಿಕೆಟ್ ಕಳೆದು 163 ರನ್ ಗಳಿಸಿತು. ಪಂದ್ಯ ಟೈ ಎನಿಸಿತು. ಆದರೆ ಸೂಪರ್ ಓವರ್‌ನಲ್ಲಿ ಕೆಕೆಆರ್‌ ಗೆದ್ದಿತ್ತು.

Story first published: Monday, October 19, 2020, 9:52 [IST]
Other articles published on Oct 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+