ಐಪಿಎಲ್: ಕೋಲ್ಕತ್ತಾ vs ಚೆನ್ನೈ, ಮುಖಾಮುಖಿಯ ಅಂಕಿ-ಅಂಶಗಳು

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂ ಕುತೂಹಲಕಾರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಅಕ್ಟೋಬರ್ 7ರಂದು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 21ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕಾದಾಡಲಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ತಂಡ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು ಕಂಡಿದೆ. ದಿನೇಶ್ ಕಾರ್ತಿಕ್ ಮುಂದಾಳತ್ವದ ಕೋಲ್ಕತ್ತಾ 4ರಲ್ಲಿ 2 ಜಯ ಗಳಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡಕ್ಕೂ ಇಂದಿನ ಪಂದ್ಯದ ಗೆಲುವು ಮುಖ್ಯವಾಗಿದೆ. ಸಿಎಸ್‌ಕೆಗೆ ಆಲ್ ರೌಂಡರ್ ಡ್ವೇನ್ ಬ್ರಾವೋ ಮರಳಿದ್ದಾರೆ. ಅನುಭವಿಗಳಾದ ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್ ಮತ್ತೆ ಫಾರ್‌ಗೆ ಬಂದಿದ್ದಾರೆ. ಹೀಗಾಗಿ ಚೆನ್ನೈ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.
ಇಂದಿನ ಪಂದ್ಯ 7.30 pmಗೆ ಆರಂಭವಾಗಲಿದೆ. ಇತ್ತಂಡಗಳ ಮುಖಳಾಮುಖಿಗೂ ಮುನ್ನ ಹಿಂದಿನ ಕದನಗಳ ಅಂಕಿ-ಅಂಶಗಳು ಕೆಳಗಿವೆ ನೋಡಿ.

ಒಟ್ಟು ಮುಖಾಮುಖಿ
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 23
* ಕೆಕೆಆರ್ ಗೆದ್ದ ಪಂದ್ಯಗಳು: 8
* ಸಿಎಸ್ಕೆ ಗೆದ್ದ ಪಂದ್ಯಗಳು: 14
* ಭಾರತದಲ್ಲಿ ಆಡಿದ ಪಂದ್ಯ: 21 (ಕೆಕೆಆರ್ 7, ಸಿಎಸ್ಕೆ 14)

ಯುಎಇಯಲ್ಲಿ ಪಂದ್ಯ
* ಯುಎಇಯಲ್ಲಿ ಆಡಿದ ಪಂದ್ಯಗಳು: 0 (ಕೆಕೆಆರ್ 0, ಸಿಎಸ್ಕೆ 0)
* ಸಿಎಸ್‌ಕೆ ವಿರುದ್ಧ ಕೆಕೆಆರ್ ಸರಾಸರಿ ಸ್ಕೋರ್: 150
* ಕೆಕೆಆರ್ ವಿರುದ್ಧ ಸಿಎಸ್ಕೆ ಸರಾಸರಿ ಸ್ಕೋರ್: 154

ಹೆಚ್ಚು ರನ್ ಕೊಡುಗೆ
* ಕೆಕೆಆರ್‌ಗೆ ಹೆಚ್ಚಿನ ರನ್: 268 (ಆಂಡ್ರೆ ರಸ್ಸೆಲ್)
* ಸಿಎಸ್‌ಕೆಗೆ ಹೆಚ್ಚಿನ ರನ್: 470 (ಎಂಎಸ್ ಧೋನಿ)
* ಕೆಕೆಆರ್‌ಗೆ ಹೆಚ್ಚಿನ ವಿಕೆಟ್‌ಗಳು: 14 (ಸುನಿಲ್ ನರೈನ್)

ಹೆಚ್ಚು ವಿಕೆಟ್ ಪಡೆದವರು
* ಸಿಎಸ್‌ಕೆಗೆ ಹೆಚ್ಚಿನ ವಿಕೆಟ್‌ಗಳು: 14 (ರವೀಂದ್ರ ಜಡೇಜಾ)
* ಕೆಕೆಆರ್‌ಗೆ ಹೆಚ್ಚಿನ ಕ್ಯಾಚ್‌ಗಳು: 2 (ಶಿವಂ ಮಾವಿ, ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್)
* ಸಿಎಸ್‌ಕೆಗಾಗಿ ಹೆಚ್ಚಿನ ಕ್ಯಾಚ್‌ಗಳು: 9 (ಡ್ವೇನ್ ಬ್ರಾವೋ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications