
ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 7) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 21ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕಾದಾಡಲಿವೆ. ಇಂದಿನ ಕದನದಲ್ಲಿ ಸಿಎಸ್‌ಕೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಈವರೆಗೆ ಆಡಿರುವ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4ರಲ್ಲಿ 2 ಗೆಲುವು ಕಂಡಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 5ರಲ್ಲಿ 2 ಪಂದ್ಯ ಗೆದ್ದಿದೆ. ಸದ್ಯದ ಪಾಯಿಂಟ್ಸ್ ಟೇಬಲ್‌ನಲ್ಲಿ 4 ಅಂಕ ಕಲೆ ಹಾಕಿರುವ ಕೆಕೆಆರ್ 4ನೇ ಸ್ಥಾನದಲ್ಲಿದ್ದರೆ, 4 ಅಂಕ ಗಳಿಸಿರುವ ಸಿಎಸ್‌ಕೆ 5ನೇ ಸ್ಥಾನದಲ್ಲಿದೆ.
ಇತ್ತಂಡಗಳ ಪಂದ್ಯ ನಡೆಯುವ ಬುಧವಾರ ಅಬುಧಾಬಿನಲ್ಲಿ 37 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ರಾತ್ರಿಯ ವೇಳೆ 30 ಡಿಗ್ರೀ ಸೆಲ್ಶಿಯಸ್‌ಗೆ ತಾಪಮಾನ ಇಳಿಯಲಿದೆ. ಇಲ್ಲಿನ ಪಿಚ್ ಎರಡನೇ ಇನ್ನಿಂಗ್ಸ್‌ಗೆ ಹೆಚ್ಚು ಅನುಕೂಲಕಾರಿಯಾಗಲಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆರಿಸುವ ಸಾಧ್ಯತೆ ಹೆಚ್ಚು. 7 pmಗೆ ಟಾಸ್ ನಡೆಯಲಿದೆ.
ಕೋಲ್ಕತ್ತಾ ಸಂಭಾವ್ಯ ತಂಡ: ಶುಬ್ಮನ್ ಗಿಲ್, ಸುನಿಲ್ ನರೈನ್, ನಿತೀಶ್ ರಾಣಾ, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ಸಿ, ಡಬ್ಲ್ಯೂಕೆ), ಇಯಾನ್ ಮಾರ್ಗನ್, ಪ್ಯಾಟ್ ಕಮ್ಮಿನ್ಸ್, ರಾಹುಲ್ ತ್ರಿಪಾಠಿ, ಶಿವಂ ಮಾವಿ, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ.
ಚೆನ್ನೈ ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್. ಧೋನಿ (ಸಿ, ಡಬ್ಲ್ಯೂಕೆ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ, ದೀಪಕ್ ಚಹರ್.