Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಣಾ-ನರೈನ್-ಚಕ್ರವರ್ತಿ ಭರ್ಜರಿ ಆಟ, ಡೆಲ್ಲಿ ಮಣಿಸಿದ ಕೋಲ್ಕತ್ತಾ

IPL 2020: KKR vs DC Match 42 highlights in kannada

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 24) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 59 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿದೆ. ನಿರೀಶ್ ರಾಣಾ, ಸುನಿಲ್ ನರೈನ್ ಸ್ಫೋಟಕ ಬ್ಯಾಟಿಂಗ್, ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಬಲದಿಂದ ಕೆಕೆಆರ್ ಸುಲಭ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್‌, ಶುಬ್‌ಮನ್ ಗಿಲ್ 9, ನಿತೀಶ್ ರಾಣಾ 81 (53 ಎಸೆತ), ರಾಹುಲ್ ತ್ರಿಪಾಠಿ 13, ಸುನಿಲ್ ನರೈನ್ 64 (32 ಎಸೆತ), ಇಯಾನ್ ಮಾರ್ಗನ್ 17 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 194 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೈಫಲ್ಯ ತೋರಿಸಿತು. ಶ್ರೇಯಸ್ ಐಯ್ಯರ್ 47, ರಿಷಭ್ ಪಂತ್ 27, ಶಿಮ್ರನ್ ಹೆಟ್ಮೈಯರ್ 10, ಆರ್‌ ಅಶ್ವಿನ್ 14, ಅಕ್ಸರ್ ಪಟೇಲ್ 9, ಕಾಗಿಸೋ ರಬಾಡ 9 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 135 ರನ್ ಗಳಿಸಿ ತಲೆ ಬಾಗಿತು.

ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಅನ್ರಿಕ್ ನಾರ್ಟ್ಜೆ 2, ಕಾಗಿಸೊ ರಬಾಡ 2, ಮಾರ್ಕಸ್ ಸ್ಟೋಯ್ನಿಸ್ 2 ವಿಕೆಟ್ ಪಡೆದರೆ, ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌ನ ಪ್ಯಾಟ್ ಕಮಿನ್ಸ್ 13 ರನ್‌ಗೆ 3, ವರುಣ್ ಚಕ್ರವರ್ತಿ 20 ರನ್‌ಗೆ 5 ವಿಕೆಟ್‌ ಪಡೆದು ಮಿಂಚಿದರು. ವರುಣ್ ಚಕ್ರವರ್ತಿ ಪಂದ್ಯಶ್ರೇಷ್ಠರೆನಿಸಿದರು.

Story first published: Saturday, October 24, 2020, 19:39 [IST]
Other articles published on Oct 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+