ಐಪಿಎಲ್ 2020: ಕೋಲ್ಕತ್ತಾ vs ಪಂಜಾಬ್, ಟಾಸ್ ವರದಿ, ಪ್ಲೇಯಿಂಗ್ XI

ಅಬುಧಾಬಿ: ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 24ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾದಾಡುತ್ತಿವೆ. ಎರಡೂ ತಂಡಗಳಿಗೂ ಇಂದಿನ ಗೆಲುವು ಅನಿವಾರ್ಯವೆನಿಸಿದೆ. ಅದರಲ್ಲೂ ಪಂಜಾಬ್‌ಗಂತೂ ಗೆಲುವಿನ ಒತ್ತಡ ಇನ್ನೂ ಹೆಚ್ಚಿದೆ. ಟಾಸ್ ಗೆದ್ದಿರುವ ಕೆಕೆಆರ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಈವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೇವಲ 1 ಜಯ ದಾಖಲಿಸಿರುವ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ XI ಪಂಜಾಬ್ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿದೆ. 5ರಲ್ಲಿ 3 ಪಂದ್ಯಗಳನ್ನು ಗೆದ್ದಿರುವ ದಿನೇಶ್ ಕಾರ್ತಿಕ್ ಕ್ಯಾಪ್ಟನ್ಸಿಯ ಕೆಕೆಆರ್ ನಾಲ್ಕನೇ ಸ್ಥಾನದಲ್ಲಿದೆ.
ಕೆಕೆಆರ್ ಪ್ಲೇಯಿಂಗ್ XI: ರಾಹುಲ್ ತ್ರಿಪಾಠಿ, ಶುಬ್ಮನ್ ಗಿಲ್, ನಿತೀಶ್ ರಾಣಾ, ಸುನಿಲ್ ನರೈನ್, ಇಯಾನ್ ಮಾರ್ಗನ್, ಆ್ಯಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ವಿಕೆ/ಸಿ), ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ.
ಕೆXIಪಿ ಪ್ಲೇಯಿಂಗ್ XI: ಕೆ.ಎಲ್. ರಾಹುಲ್ (ಸಿ), ಮಾಯಂಕ್ ಅಗರ್ವಾಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್, ಸಿಮ್ರಾನ್ ಸಿಂಗ್ (ವಿಕೆ), ಗ್ಲೆನ್ ಮ್ಯಾಕ್ಸ್ ವೆಲ್, ಮುಜೀಬ್ ಉರ್ ರಹಮಾನ್, ಕ್ರಿಸ್ ಜೋರ್ಡಾನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications